ಮಂಗಳೂರು: ನಗರದ ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆ ಹಾಗೂ ಸ್ಪೈಸಿಸ್ ಎನ್ ಷೆಫ್ ಆಶ್ರಯದಲ್ಲಿ ಕಾಲೇಜಿನಲ್ಲಿ ಭಾನುವಾರ ‘ಎಕ್ಸ್‌ಪರ್ಟ್ ಮಾಸ್ಟರ್ ಚೆಫ್ ಸ್ಪರ್ಧೆ –2023’ ನಡೆಯಿತು. ಎಕ್ಸ್‌ಪರ್ಟ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರನ್ನೊಳಗೊಂಡ ಎಂಟು ತಂಡಗಳು ಭಾಗವಹಿಸಿದವು.
ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷೆ ಉಷಾ ಪ್ರಭಾ ಎನ್.ನಾಯಕ್, ‘ಕಾಲೇಜಿನಲ್ಲಿ ಮಾಸ್ಟರ್ ಷೆಫ್ ಸ್ಪರ್ಧೆಯನ್ನು ಆಯೋಜಿಸಿರುವುದು ವಿದ್ಯಾರ್ಥಿಗಳ ನಡುವೆ ಪೈಪೋಟಿ ಬೆಳೆಸುವ ಉದ್ದೇಶದಿಂದ ಅಲ್ಲ. ಆಹಾರದ ಮೌಲ್ಯ ಮತ್ತು ಅಡುಗೆಯ ಹಿಂದಿರುವ ಪರಿಶ್ರಮದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜ್ಞಾನ ಶಕ್ತಿಯೂ ವೃದ್ಧಿಸಲಿದೆ’ ಎಂದರು.
ಕಾಲೇಜಿನ ಆಡಳಿ ಮಂಡಳಿಯ ಅಧ್ಯಕ್ಷ ನರೇಂದ್ರ ಎಲ್ ನಾಯಕ್, ‘ಸ್ಪೈಸಿಸ್ ಎನ್ ಷೆಫ್’ನ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಪಲ್ಲಿಯಿಲ್, ಓಷಿಯನ್ ಪರ್ಲ್ ಹೊಟೇಲ್‌ನ ಎಕ್ಸಿಕ್ಯುಟಿವ್ ಷೆಫ್ ದೇವರತ್ ಮಂಡಲ್, ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಗಳ ಬಳಗದ ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಎಸ್.ಆರ್.ಎಂ ಡಿಸ್ಟ್ರಿಬ್ಯೂಟರ್ಸನ ಮಾಲೀಕ ಮೋಹನ್ ಪೈ, ‘ಸಿನ್‌ಫುಲ್ ಟೆಂಪ್ಟೇಷನ್’ನ ಮುಖ್ಯಸ್ಥೆ ಅನನ್ಯಾ ಹರೀಶ್, ಮಿಲಾಗ್ರೀಸ್ ಕಾಲೇಜಿನ ಬಿ.ಎಸ್ಸಿ ಹಾಸ್ಪಿಟ್ಯಾಲಿಟಿ ವಿಭಾಗದ ಮುಖ್ಯಸ್ಥ ಡೆನ್ಝಿಲ್ ಡಿ ಕೋಸ್ಟ, ಪ್ರಾಧ್ಯಾಪಕ ಅರಿತ್ ಜೋಯಲ್ ಪಿಂಟೊ, ಸುಗಂಧಿ ಫುಡ್ ರೀಟೈಲ್ಸ್‌ನ ಕಾರ್ಯನಿರ್ವಹಣಾ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಅನುರಾಧಾ ಜಿ.ಭಟ್, ಎಕ್ಸ್‌ಪರ್ಟ್ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ಭಟ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.