ಮಂಗಳೂರು: ಕೊಳತ್ತಮಜಲುವಿನ ಅಬ್ದುಲ್ ರಹಿಮಾನ್ ಹತ್ಯೆಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮಗಳಲ್ಲಿ ನಿರ್ದಿಷ್ಟ ಸಮುದಾಯದ ವಿರುದ್ಧ ದ್ವೇಷಕಾರುವ ಸುದ್ದಿ ಹಾಗೂ ಸುಳ್ಳು ಸುದ್ದಿ ಹಂಚಿಕೊಂಡ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ನಿರ್ದಿಷ್ಟ ಸಮುದಾಯದವರನ್ನು ಪ್ರಚೋದಿಸಲು ‘ವಾಮಂಜೂರು ಫ್ರೆಂಡ್ಸ್’ಎಂಬ ವಾಟ್ಸ್ ಆ್ಯಪ್ ಗ್ರೂಪಿನಲ್ಲಿ ‘ಅನೈತಿಕ ಸಂಬಂಧ’ದ ಬಗ್ಗೆಉದ್ದೇಶ ಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ರಿತೇಶ್ ಅಲಿಯಾಸ್ ರಿತು ಎಂಬಾತನ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಟೀಮ್ ಜೋಕರ್ಸ್’ ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ನಮ್ಮ ಸಹೋದರರನ್ನು ಕೊಂದ ಚಕ್ಕ ಶಿಖಂಡಿಗಳ ರಕ್ತ ಈ ಭೂಮಿಗೆ ಹರಿಸದೆ ನಾವು ಸುಮ್ಮನೆ ಕೂರುವುದಿಲ್ಲ ಇದಕ್ಕೆ ಉತ್ತರಕೊಟ್ಟೆ ಕೊಡುವೆವು ನಿಮ್ಮಂತಹ ಶಿಖಂಡಿಗಳು ನಾವು ಅಲ್ಲ. ನಮ್ಮ ಸಹೋದರನ ಕೊಂದ ನಾಮರ್ದ ಚಕ್ಕ ಶಿಖಂಡಿಗಳ ರಕ್ತ ಭೂಮಿಗೆ ಹರಿಸುವುದು ಶತಸಿದ್ಧ’ಎಂಬ ಸಂದೇಶ ಹಾಕಿಕೊಂಡ ಬಗ್ಗೆ ಎಫ್ಐಆರ್ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.