ADVERTISEMENT

ಉಪ್ಪಿನಂಗಡಿ: ಆಕಸ್ಮಿಕ ಬೆಂಕಿ, ಮನೆ ಸಾಮಗ್ರಿ ಭಸ್ಮ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2024, 14:19 IST
Last Updated 27 ಏಪ್ರಿಲ್ 2024, 14:19 IST
ಬೆಂಕಿಗಾಹುತಿಯಾದ ಸಾಮಗ್ರಿ
ಬೆಂಕಿಗಾಹುತಿಯಾದ ಸಾಮಗ್ರಿ   

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಮಠ ಎಂಬಲ್ಲಿ ಮನೆಯ ಒಳಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಮನೆ ಸಾಮಗ್ರಿ ಸುಟ್ಟು ಕರಕಲಾದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.

ಮಠ ನಿವಾಸಿ ಅಸ್ಮಾಮ್ ಎಂಬುವರ ಮನೆಯಲ್ಲಿ ಈ ಅವಘಡ ನಡೆದಿದೆ. ಮನೆ ಮಾಲೀಕ ವಿದೇಶದಲ್ಲಿದ್ದು, ಪತ್ನಿ ಖೌಸರ್ ಮನೆಗೆ ಬೀಗ ಹಾಕಿ ಮಕ್ಕಳೊಂದಿಗೆ ಪೇಟೆ ತೆರಳಿದ್ದರು. ಈ ವೇಳೆ ಮನೆ ಒಳಗಿನಿಂದ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ಮನೆ ಸಾಮಗ್ರಿ ಬೆಂಕಿಗೆ ಆಹುತಿಯಾಗಿದೆ.

ಮನೆಯ ಒಳಗಿನಿಂದ ಹೊಗೆ ಹೊರ ಬರುವುದನ್ನು ಗಮನಿಸಿದ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ರಶೀದ್, ಸ್ಥಳೀಯರಾದ ಸಿದ್ದಿಕ್, ಹನೀಫ್, ಯು.ಟಿ.ಫಯಾಜ್ ಬೆಂಕಿ ನಂದಿಸಲು ಮುಂದಾದರು. ಆ ವೇಳೆಗೆ ಪುತ್ತೂರು ಅಗ್ನಿ ಶಾಮಕ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು.

ADVERTISEMENT

ಮನೆಯ ಒಳಗೆ ಇದ್ದ ವಿದ್ಯುತ್‌ ಉಪಕರಣಗಳು, ಪೀಠೋಪಕರಣ, ಬಟ್ಟೆ, ದಾಖಲೆ ಪತ್ರಗಳು ಸುಟ್ಟು ಕರಕಲಾಗಿವೆ. ವಿದ್ಯುತ್ ಶಾರ್ಟ್‌ ಸರ್ಕಿಟ್‌ನಿಂದ ಅವಘಡ ನಡೆದಿರಬಹುದು ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.