ಮಂಗಳೂರು: ಮೀನುಗಾರಿಕಾ ದೋಣಿಯೊಂದು ಎಂಜಿನ್ ವೈಫಲ್ಯದಿಂದ ಪಣಂಬೂರು ಚಿತ್ರಾಪುರ ಬಳಿ ಸಮುದ್ರದ ದಡಕ್ಕೆ ಸೇರಿದೆ.
ಶ್ರೀ ಮಾರುತಿ ಎಂಬ ಹೆಸರಿನ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ವೇಳೆ ಎಂಜಿನ್ ವೈಫಲ್ಯ ಉಂಟಾಗಿ ಗಾಳಿಯ ರಭಸಕ್ಕೆ ಸಮುದ್ರದಂಡೆಗೆ ಬಂದು ಅಪ್ಪಳಿಸಿದೆ.
ಬೋಟ್‌ನಲ್ಲಿ ನಾಲ್ಕು ಜನ ಮೀನುಗಾರರಿದ್ದು, ಎಲ್ಲರೂ ಪಾರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.