ADVERTISEMENT

ಕೋಳಿ ಅಂಕ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 11:25 IST
Last Updated 8 ಸೆಪ್ಟೆಂಬರ್ 2020, 11:25 IST

ಪುತ್ತೂರು: ತಾಲ್ಲೂಕಿನ ಬಲ್ನಾಡು ಗ್ರಾಮದ ಪದವು ಎಂಬಲ್ಲಿ ಸರ್ಕಾರಿ ಗೇರು ತೋಟದಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಸಂಪ್ಯ ಪೊಲೀಸರು ದಾಳಿ ನಡೆಸಿ, ಐವರನ್ನು ಬಂಧಿಸಿದ್ದಾರೆ.

ಸಂದೀಪ್, ಅಶ್ವಿತ್, ಸುರೇಂದ್ರ, ಜಯಗುರು ಮತ್ತು ಸುರೇಂದ್ರ ಬಂಧಿತರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಗಸ್ತಿನಲ್ಲಿದ್ದ ಪೊಲೀಸರು, ಬಂಧಿತರಿಂದ ಒಂದು ಹುಂಜ, ಜೂಜಿಗೆ ಬಳಸಿದ್ದ ₹ 6700 ನಗದು, ಆಟೊರಿಕ್ಷಾ, ನಾಲ್ಕು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT