
ಮಂಗಳೂರು: ನವದೆಹಲಿಯಲ್ಲಿ ನ.25ರಿಂದ ಆರಂಭವಾಗಲಿರುವ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಸಂಜೀವಿನಿ ಯೋಜನೆಯ ನವೀ ಚೇತನಾ 4.0 ಅಭಿಯಾನದಲ್ಲಿ ರಾಜ್ಯ ಐವರು ಮಹಿಳೆಯರು ಭಾಗವಹಿಸಲಿದ್ದಾರೆ.
ಲಿಂಗತ್ವ ಸಮುದಾಯ ಕ್ಷೇತ್ರದಲ್ಲಿ ಕೆಲಸ ಮಾಡಿರುವ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನ ಸೌಮ್ಯಾ ಹೊಸಂಗಡಿ, ಹಾವೇರಿಯ ಪ್ರೀತಿ ಕೆ.ಆರ್, ತುಮಕೂರಿನ ಸ್ವರೂಪ ಎಂ.ಡಿ, ಯಾದಗಿರಿಯ ರಾಜೇಶ್ವರಿ ಹಾಗೂ ಶ್ರೀದೇವಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಸೋಮವಾರ ನವದೆಹಲಿಗೆ ತೆರಳಿದ್ದಾರೆ.
ನ.25ರಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್‌ಸಿಂಗ್ ಚೌಹಾಣ್ ಅಭಿಯಾನ ಉದ್ಘಾಟಿಸುವರು. ಇದೇ ವೇದಿಕೆಯಲ್ಲಿ ಕರ್ನಾಟಕದ ಪ್ರತಿನಿಧಿಗಳ ಪರವಾಗಿ ಸೌಮ್ಯಾ ಹೊಸಂಗಡಿ ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ. ‘ಮಹಿಳೆಯರ ಆರ್ಥಿಕ ಸಬಲೀಕರಣದ ಮೂಲಕ ಲಿಂಗಾಧಾರಿತ ಭೇದ ಭಾವ ಮತ್ತು ಹಿಂಸಾಚಾರ ನಿವಾರಣೆ’ ಈ ವರ್ಷದ ಧ್ಯೇಯವಾಕ್ಯವಾಗಿದೆ. ಡಿ.23ರವರೆಗೆ ಅಭಿಯಾನ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.