ADVERTISEMENT

ತೊಕ್ಕೊಟ್ಟು : 110 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜಾರೋಹಣ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 4:47 IST
Last Updated 16 ಆಗಸ್ಟ್ 2022, 4:47 IST
ಉಳ್ಳಾಲದಿಂದ ತೊಕ್ಕೊಟ್ಟುವರೆಗಿನ ಪಥಸಂಚಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
ಉಳ್ಳಾಲದಿಂದ ತೊಕ್ಕೊಟ್ಟುವರೆಗಿನ ಪಥಸಂಚಲನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು   

ಉಳ್ಳಾಲ: ತೊಕ್ಕೊಟ್ಟುವಿನಲ್ಲಿ 110 ಅಡಿ ಎತ್ತರದ ಸ್ತಂಭದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಉಳ್ಳಾಲ ತಾಲ್ಲೂಕಿನಲ್ಲಿ ಅದ್ಧೂರಿಯಾಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಲಾಯಿತು.

ಇಂದಿನ ಮಕ್ಕಳು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಇನ್ನಷ್ಟು ವಿಜೃಂಭಣೆಯಿಂದ ಓಗ್ಗಟ್ಟಿನಿಂದ ಆಚರಿಸುವ ಸಂಪೂರ್ಣ ವಿಶ್ವಾಸವಿದೆ. ಇಂದಿನ ಕಾರ್ಯಕ್ರಮವು ಸರ್ವಧರ್ಮದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ ಎಂದು ಧ್ವಜಾರೋಹಣ ಮಾಡಿದ ವಿಧಾನಸಭೆಯಲ್ಲಿ ವಿರೋಧ ಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದರು.

ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ವರೆಗೆ ವಿದ್ಯಾರ್ಥಿಗಳ ಪಥಸಂಚಲನ ನಡೆಯಿತು.

ADVERTISEMENT

ವಿಧಾನಪರಿಷತ್‌ ಸದಸ್ಯ ಬಿ.ಎಂ ಫಾರೂಕ್‌, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್‌, ಉಪಾಧ್ಯಕ್ಷ ಐಯೂಬ್‌ ಮಂಚಿಲ, ಮುಖಂಡರಾದ ಸಂತೋಷ್‌ ರೈ ಬೋಳಿಯಾರ್‌, ಸತೀಶ್‌ ಕುಂಪಲ, ಸದಾಶಿವ ಉಳ್ಳಾಲ್‌, ಚಂದ್ರಹಾಸ್‌ ಪಂಡಿತ್‌ ಹೌಸ್‌, ಮಹಮ್ಮದ್ ಮೋನು, ತಹಶೀಲ್ದಾರ್‌ ಗುರುಪ್ರಸಾದ್‌, ತಾ.ಪಂ. ಇಒ ನಾಗರಾಜ್‌, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್‌, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಶೈಲಾ ಜಿ. ಕಾರೆ ಇದ್ದರು.

ಪಥಸಂಚಲನದಲ್ಲಿ ಉಳ್ಳಾಲದ ಹಝ್ರತ್‌ ಸೈಯ್ಯದ್ ಮದನಿ ಪ್ರೌಢಶಾಲೆ (ಪ್ರಥಮ), ಸರ್ಕಾರಿ ಪ್ರೌಢಶಾಲೆ ಬಬ್ಬುಕಟ್ಟೆ (ದ್ವಿತೀಯ) ಹಾಗೂ ಹಳೇಕೋಟೆ ಉಳ್ಳಾಲದ ಸೈಯ್ಯದ್‌ ಮದನಿ ಶಾಲೆ (ತೃತೀಯ) ಪ್ರಶಸ್ತಿ ಪಡೆದುಕೊಂಡಿತು. ಕಾಲೇಜು ವಿಭಾಗದಲ್ಲಿ ಮದನಿ ಪಿಯು ಕಾಲೇಜು(ಪ್ರಥಮ), ಭಾರತ್‌ ಪಿಯು ಕಾಲೇಜು (ದ್ವಿತೀಯ) ಹಾಗೂ ಕೋಟೆಪುರ ಟಿಪ್ಪು ಸುಲ್ತಾನ್‌ ಕಾಲೇಜು (ತೃತೀಯ) ಪ್ರಶಸ್ತಿ ಪಡೆದುಕೊಂಡಿತು. ಸರ್ವಾಂಗೀಣ ಪ್ರದರ್ಶನ ಪ್ರದರ್ಶಿಸಿದ ಬಬ್ಬುಕಟ್ಟೆ ನಿತ್ಯಾಧರ್‌ ಇಂಗ್ಲಿಷ್‌ ಮಾಧ್ಯಮ ಶಾಲೆ ರೋಲಿಂಗ್‌ ಟ್ರೋಫಿಯನ್ನು ಪಡೆದುಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.