ADVERTISEMENT

ಆ.5 ರಿಂದ ಗಲ್ಫ್‌ ರಾಷ್ಟ್ರಗಳಿಗೆ ವಿಮಾನಯಾನ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 16:41 IST
Last Updated 28 ಜುಲೈ 2020, 16:41 IST

ಮಂಗಳೂರು: ವಂದೇ ಭಾರತ್ ಮಿಷನ್ ಅಡಿಯಲ್ಲಿ ಐದನೇ ಹಂತದ ವೇಳಾಪಟ್ಟಿ ಪ್ರಕಟಗೊಂಡಿದ್ದು, ಆಗಸ್ಟ್ ಮೊದಲ ಹಾಗೂ ಎರಡನೇ ವಾರದಲ್ಲಿ ಏಳು ವಿಮಾನಗಳು ನಗರದಿಂದ ಗಲ್ಫ್‌ ರಾಷ್ಟ್ರಗಳಿಗೆ ತೆರಳಲಿವೆ.

ಆ.5 ರಂದು ಮೊದಲ ವಿಮಾನ ಮಂಗಳೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 12.40ಕ್ಕೆ ಹೊರಡಲಿದ್ದು, ಮಧ್ಯಾಹ್ನ 2.30 ಕ್ಕೆ ದುಬೈ ತಲುಪಲಿದೆ. ಎರಡನೇ ವಿಮಾನ ಆ. 6 ರಂದು ಮಧ್ಯಾಹ್ನ 12.40 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ 2.30ಕ್ಕೆ ದುಬೈ ತಲುಪಲಿದೆ. ಮೂರನೇ ವಿಮಾನ ಆ.9 ರಂದು ಮಧ್ಯಾಹ್ನ 12.40 ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಟು, ಮಧ್ಯಾಹ್ನ 2.30ಕ್ಕೆ ದುಬೈ ತಲುಪಲಿದೆ.

ಆ.8 ರಂದು ಬೆಳಿಗ್ಗೆ 11.05 ಕ್ಕೆ ಇಲ್ಲಿನ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ, ಮಧ್ಯಾಹ್ನ 1 ಗಂಟೆಗೆ ಶಾರ್ಜಾ ವಿಮಾನ ನಿಲ್ದಾಣ ತಲುಪಲಿದೆ. ಆ. 15 ರಂದು ಬೆಳಿಗ್ಗೆ 11.05ಕ್ಕೆ ಇಲ್ಲಿಂದ ಹೊರಡುವ ವಿಮಾನ ಮಧ್ಯಾಹ್ನ 1 ಗಂಟೆಗೆ ಶಾರ್ಜಾ ತಲುಪಲಿದೆ.

ADVERTISEMENT

ಆ.7 ರಂದು ಮಧ್ಯಾಹ್ನ 12.40ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡುವ ವಿಮಾನ ಮಧ್ಯಾಹ್ನ 2.30ಕ್ಕೆ ಅಬುಧಾಬಿ ವಿಮಾನ ನಿಲ್ದಾಣ ತಲುಪಲಿದೆ. ಆ. 14 ರಂದು ಮಧ್ಯಾಹ್ನ 12.40 ಕ್ಕೆ ಹೊರಡುವ ಇನ್ನೊಂದು ವಿಮಾನ ಮಧ್ಯಾಹ್ನ 14.30 ಕ್ಕೆ ಅಬುಧಾಬಿ ತಲುಪಲಿದೆ. ಈ ವಿಮಾನಗಳು ಮರಳುವ ಸಂದರ್ಭದಲ್ಲಿ ಅಲ್ಲಿರುವ ಕನ್ನಡಿಗರನ್ನು ತಾಯ್ನಾಡಿಗೆ ಕರೆತರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.