ADVERTISEMENT

ಬಹರೇನ್‌ನಿಂದ ಬಂದ ವಿಮಾನ

​ಪ್ರಜಾವಾಣಿ ವಾರ್ತೆ
Published 13 ಜುಲೈ 2020, 6:01 IST
Last Updated 13 ಜುಲೈ 2020, 6:01 IST

ಮಂಗಳೂರು: ವಂದೇ ಭಾರತ್ ಮಿಷನ್‌ನಡಿ ಬಹರೇನ್‌ನಿಂದ ನಗರಕ್ಕೆ ಮೊದಲ ವಿಮಾನವು ಭಾನುವಾರ ಸಂಜೆ ಬಂದಿಳಿದಿದ್ದು, 120 ಮಂದಿಯನ್ನು ಕರೆತಂದಿದೆ.

ಸ್ಥಳೀಯ ಉದ್ಯಮಿ, ಭಾರತೀಯ ಸಾಗರೋತ್ತರ ಕಾಂಗ್ರೆಸ್(ಐಒಸಿ)ನ ಬಹರೇನ್‌ ಘಟಕದ ಅಧ್ಯಕ್ಷ ಮಹಮ್ಮದ್ ಮನ್ಸೂರ್ ಪ್ರಯತ್ನದಿಂದ ಏರ್ ಇಂಡಿಯಾ ಎಕ್ಸ್ ಪ್ರೆಸ್‌ನ ಈ ವಿಶೇಷ ವಿಮಾನವು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬಹರೇನ್‌ನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿತ್ತು. ಸಂಜೆ 4.45ರ ಸುಮಾರಿಗೆ ಇಲ್ಲಿನ ವಿಮಾನ ನಿಲ್ದಾಣ ತಲುಪಿದೆ.

ದುಬೈ, ಮತ್ತಿತರರ ಗಲ್ಫ್‌ ರಾಷ್ಟ್ರಗಳಿಂದ ನಗರಕ್ಕೆ ಹಲವು ವಿಮಾನಗಳ ವ್ಯವಸ್ಥೆ ಕಲ್ಪಿಸಲಾಗಿದ್ದರೂ, ಬಹರೇನ್‌ನಿಂದ ವಿಮಾನದ ವ್ಯವಸ್ಥೆ ಆಗಿರಲಿಲ್ಲ. ಮಹಮ್ಮದ್ ಮನ್ಸೂರ್ ಅವರು ಭಾರತೀಯ ದೂತಾವಾಸದೊಡನೆ ಮಾತುಕತೆ ನಡೆಸಿ, ವಿಶೇಷ ವಿಮಾನ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.