ADVERTISEMENT

ಅಕ್ರಮ ಮರಳು: ಶಾಸಕರು ವಿಫಲ

ಶಾಸಕ ಡಾ.ಶೆಟ್ಟಿ ವಿರುದ್ಧ ಮಾಜಿ ಶಾಸಕ ಬಾವ ಆರೋಪ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 5:37 IST
Last Updated 16 ಸೆಪ್ಟೆಂಬರ್ 2020, 5:37 IST
ಮೊಹಿಯುದ್ದೀನ್‌ ಬಾವ
ಮೊಹಿಯುದ್ದೀನ್‌ ಬಾವ   

ಮಂಗಳೂರು: ಮಂಗಳೂರು (ಉತ್ತರ) ಕ್ಷೇತ್ರವನ್ನು ಪ್ರತಿನಿಧಿಸುವ ಬಿಜೆಪಿ ಶಾಸಕರು ಅನಧಿಕೃತ ಮರಳು ಗಣಿಗಾರಿಕೆ ತಡೆಯಲು ವಿಫಲರಾಗಿದ್ದಾರೆ ಎಂದು ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಣ್ಣೀರುಬಾವಿ, ನಾಯರ್ ಕುದ್ರು, ಮೀನಕಾಲಿಯಾ, ಅಡ್ಯಾರ್ ಪಡೀಲ್‌, ಅದ್ಯಂಪಾಡಿ ಹಾಗೂ ಇತರೆ ಸ್ಥಳಗಳಲ್ಲಿ ಹೆಚ್ಚು ಅಕ್ರಮ ಮರುಳು ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳಿದ್ದು ಇವೆಲ್ಲದರ ಬಗ್ಗೆ ಶಾಸಕರಿಗೆ ತಿಳಿದಿದೆ. ಆದರೆ, ಅವುಗಳನ್ನು ತಡೆಯುವಲ್ಲಿ ಅವರು ವಿಫಲವಾಗಿದ್ದಾರೆ‘ ಎಂದರು.

‘ಇತ್ತೀಚೆಗೆ ಪಚ್ಚನಾಡಿಯಲ್ಲಿನ ಸರ್ಕಾರಿ ಜಾಗದಲ್ಲಿ ಅನುಮತಿಯಿಲ್ಲದೇ ಮನೆ ನಿರ್ಮಿಸುವ ಪ್ರಯತ್ನ ನಡೆದಿದ್ದು, ಇದರ ಬಗ್ಗೆ ತಿಳಿದಿದ್ದರೂ
ಶಾಸಕರು ಅದನ್ನು ತಡೆಯುವಲ್ಲಿ ಯಶಸ್ವಿಯಾಗಿಲ್ಲ. ಆದರೆ, ಕಾಂಗ್ರೆಸ್‌ ಹಾಗೂ ಸ್ಥಳೀಯರು ಈ ಅಕ್ರಮ ನಿರ್ಮಾಣವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ‘ ಎಂದು ಹೇಳಿದರು.

ADVERTISEMENT

ಹಾಲಿ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸುತ್ತಿಲ್ಲ ಎಂದು ದೂರಿದ ಅವರು, ಈ ಹಿಂದೆ ಪಚ್ಚನಾಡಿ ಸಂತೋಷ್ ನಗರ ಪ್ರದೇಶದಲ್ಲಿ ನಿತ್ಯವೂ ಕುಡಿಯುವ ನೀರು ದೊರೆಯುತ್ತಿತ್ತು. ಆದರೆ ಈಗ ಅನೇಕ ಸ್ಥಳಗಳಲ್ಲಿ ಕುಡಿಯುವ ನೀರು ಸಿಗುತ್ತಿಲ್ಲ. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಸಕರು ಮತ್ತು ಪಾಲಿಕೆ ಸದಸ್ಯರು ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.