ADVERTISEMENT

ಪುತ್ತೂರು ತಾಲ್ಲೂಕು ರಬ್ಬರ್ ಬೆಳೆಗಾರರ ಸಂಘದ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 14:30 IST
Last Updated 29 ಜೂನ್ 2025, 14:30 IST
ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯಲ್ಲಿ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು ಆಶಕ್ತರಿಗೆ ಗಾಲಿಕುರ್ಚಿ ವಿತರಿಸಿದರು
ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯಲ್ಲಿ ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅವರು ಆಶಕ್ತರಿಗೆ ಗಾಲಿಕುರ್ಚಿ ವಿತರಿಸಿದರು   

ನೆಲ್ಯಾಡಿ (ಉಪ್ಪಿನಂಗಡಿ): ಪುತ್ತೂರು ತಾಲ್ಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘದ ವಾರ್ಷಿಕ ಮಹಾಸಭೆ ನೆಲ್ಯಾಡಿಯಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ಶನಿವಾರ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ, ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು ₹ 34.06 ಕೋಟಿ ವ್ಯವಹಾರ ಮಾಡಿದ್ದು, ₹ 50.83 ಲಕ್ಷ ನಿವ್ವಳ ಲಾಭ ಗಳಿಸಿದೆ. ಈ ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ 15 ಡಿವಿಡೆಂಡ್ ಹಾಗೂ ಸಂಘಕ್ಕೆ ರಬ್ಬರ್ ಶೀಟ್ ಮಾರಾಟ ಮಾಡಿದ ಸದಸ್ಯರಿಗೆ ಪ್ರತಿ ಕೆ.ಜಿ.ಗೆ ₹ 2ರಂತೆ ಬೋನಸ್ ನೀಡಲಾಗುವುದು ಎಂದರು.

ಕಳೆದ ಸಾಲಿನಲ್ಲಿ ಠೇವಣಿ ಸಂಗ್ರಹದಲ್ಲೂ ಹೆಚ್ಚಳವಾಗಿದೆ. ರಬ್ಬರ್, ಅಡಿಕೆ ಕೃಷಿಗೆ ಪೂರಕವಾದ ಪರಿಕರ ವಿತರಿಸಲಾಗುತ್ತಿದೆ. ಸಂಘದ ಸದಸ್ಯರಿಗೆ ರಬ್ಬರ್ ದಾಸ್ತಾನು, ಸಾಲ ನೀಡಲಾಗುತ್ತಿದೆ. ಗುಣಮಟ್ಟದ ಸೇವೆ ಮೂಲಕ ರಬ್ಬರ್ ವ್ಯಾಪಾರದಲ್ಲಿ ಕಳೆದ ಸಾಲಿನಲ್ಲಿ ₹ 1.55 ಕೋಟಿ ಲಾಭಗಳಿಸಿದೆ ಎಂದು ತಿಳಿಸಿದರು.

ADVERTISEMENT

ರಬ್ಬರ್ ಬೆಳೆಗಾರರಿಗೆ ಟ್ಯಾಪಿಂಗ್ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ಸೂಪಿ ಬಿ.ಎಚ್. ಈಶ್ವರಮಂಗಲ ಹೇಳಿದರು.

ಪ್ರತಿಕ್ರಿಯಿಸಿದ ಪ್ರಸಾದ್ ಕೌಶಲ್ ಶೆಟ್ಟಿ, ರಬ್ಬರ್ ಬೋರ್ಡ್ ಜತೆ ಸೇರಿ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರ ಆಯೋಜಿಸಲಾಗುವುದು. ರಬ್ಬರ್ ಮರ ಕಡಿದು ಇನ್ನೊಂದು ಬೆಳೆಗೆ ಯಾರೂ ಮುಂದಾಗಬಾರದು. ಈ ವರ್ಷ ರಬ್ಬರ್ ಧಾರಣೆ ಇದೆ. ರಬ್ಬರ್ ಬೆಳೆಗಾರರ ಅವಶ್ಯಕತೆಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸುತ್ತೇವೆ ಎಂದರು.

ರಬ್ಬರ್ ಬೆಳೆಗಾರರಿಗೆ ಸನ್ಮಾನ: 2024-25ನೇ ಸಾಲಿನಲ್ಲಿ ಸಂಘದ ಪ್ರಧಾನ ಕಚೇರಿ, ಶಾಖೆ ಹಾಗೂ ರಬ್ಬರ್ ಖರೀದಿ ಕೇಂದ್ರಗಳಿಗೆ ಅತಿ ಹೆಚ್ಚು ರಬ್ಬರ್ ಪೂರೈಸಿದ ಸದಸ್ಯರನ್ನು ಗೌರವಿಸಲಾಯಿತು.

ಪ್ರವೀಣ್‌ಕುಮಾರ್ ಗಾಣದಮೂಲೆ, ಗೋಪಾಲಕೃಷ್ಣ ಪಿ., ಮ್ಯಾಥ್ಯು ಎ.ಸಿ., ರಾಯ್ ಅಬ್ರಹಾಂ, ಥಾಮಸ್ ಜಕಾರಿಯಾ, ಪೂವಪ್ಪ ಕೆ., ಗಿರೀಶ್‌ಕೃಷ್ಣ, ಡಾ.ಪ್ರವೀಣ್ ಪಾರೆ, ಸುರೇಶ್‌ಕುಮಾರ್ ಸೊರಕೆ, ನವೀನ್‌ಕುಮಾರ್‌ ನೆಟ್ಟಣಿಗೆ, ವಿಕ್ರಮ್ ರೈ, ಕೂಳೂರು ಸುಬ್ರಹ್ಮಣ್ಯ ಭಟ್, ರಶ್ಮಿ ಎಂ.ರೈ, ಬೇಬಿ ಜೋಸೆಫ್, ಪ್ರಸನ್ನಕುಮಾರ್ ಎ.ಕೆ., ಜಾನ್ ಪಿ.ಜೆ. ಕೆಡೆಂಬೇಲ್, ಸತ್ಯಾನಂದ ಬಿ., ನಿತ್ಯಾನಂದ, ಸುಬ್ರಹ್ಮಣ್ಯ ಶಬರಾಯ, ಮ್ಯಾಥ್ಯು ವಿ.ಎಂ., ಸಾಬು ಎ.ಎಂ.ಅವರನ್ನು ಸನ್ಮಾನಿಸಲಾಯಿತು.

ಹಿರಿಯ ರಬ್ಬರ್ ಬೆಳೆಗಾರರಾದ ಅನ್ನಮ್ಮ ಪಿ.ಎಂ.ಮಣ್ಣಗುಂಡಿ, ಶೇಷಪ್ಪ ಗೌಡ ಕೆ. ಕೋಡಿಂಬಾಳ, ಶ್ರೀನಿವಾಸ ಶೆಟ್ಟಿ ಕಟ್ಟಾರ ಬೆಳ್ಳಿಪ್ಪಾಡಿ, ಶಿವರಾಮಕೃಷ್ಣ ಭಟ್ ಶ್ರೀಶೈಲ ಪಟ್ಟಾಜೆ ಮುಂಡೂರು, ರಾಮಣ್ಣ ಗೌಡ ಕೆಯ್ಯೂರು, ಮುತ್ತಣ್ಣ ಗೌಡ ಒಡ್ಯತಡ್ಕ, ಅಪ್ಪಿ ಕೊಣಾಲು ಅವರಿಗೆ ಸ್ಮರಣಿಕೆ ನೀಡಲಾಯಿತು.

7 ಮಂದಿ ಅಶಕ್ತರಿಗೆ ಗಾಲಿಕುರ್ಚಿ ಹಾಗೂ ನಡೆದಾಡಲು ತೊಂದರೆ ಇರುವ ಮೂವರಿಗೆ ವಾಕಿಂಗ್ ಸ್ಟಿಕ್ ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ರಾಯ್ ಅಬ್ರಹಾಂ, ನಿರ್ದೇಶಕರಾದ ಜಾರ್ಜ್‌ಕುಟ್ಟಿ, ಎನ್.ವಿ.ವ್ಯಾಸ, ರಮೇಶ ಕಲ್ಪುರೆ, ಸುಭಾಷ್ ನಾಯಕ್ ಎನ್., ಸತ್ಯಾನಂದ ಬಿ., ಶ್ರೀರಾಮ ಪಕ್ಕಳ, ಗಿರೀಶ್ ಸಾಲಿಯಾನ್, ಜಯರಾಮ, ಅರುಣಾಕ್ಷಿ, ಗ್ರೇಸಿ ನೈನಾನ್ ಭಾಗವಹಿಸಿದ್ದರು.

ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ಕೆ.ಸ್ವಾಗತಿಸಿ, ಉಪಾಧ್ಯಕ್ಷ ರಾಯ್ ಅಬ್ರಹಾಂ ವಂದಿಸಿದರು. ರುಕ್ಮಯ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.