ಉಳ್ಳಾಲ (ದಕ್ಷಿಣ ಕನ್ನಡ): ಒಣಗಲು ಹಾಕಿದ್ದ ಬಟ್ಟೆ ತೆಗೆಯುವ ವೇಳೆ ಕಾಲುಜಾರಿ ನೆಲಕ್ಕೆ ಬಿದ್ದು ಬಾಲಕಿ ಮೃತಪಟ್ಟಿರುವ ಘಟನೆ ಕುತ್ತಾರು ಸಿಲಿಕೋನಿಯ ವಸತಿ ಸಂಕೀರ್ಣದಲ್ಲಿ ಸಂಭವಿಸಿದೆ.
ಖಾಸಗಿ ಆಸ್ಪತ್ರೆಯ ಅನೆಸ್ತೇಷಿಯಾ ವಿಭಾಗದ ಅಸೋಸಿಯೇಟ್ ಪ್ರೊ. ಮುಮ್ತಾಝ್ ಅಹಮ್ಮದ್ ಮತ್ತು ಸರ್ಜಿಕಲ್ ಗ್ಯಾಸ್ಟ್ರೊ ಆಂಟ್ರಾಲಜಿ ವಿಭಾಗದ ಪ್ರೊ. ಖಮರ್ಜಾ ಪುತ್ರಿ ಹಿಬಾಹ್ ಐಮಾನ್ (15) ಮೃತ ಬಾಲಕಿ.
ದಂಪತಿ ವೈದ್ಯರು ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸಹೋದರನ ಜೊತೆಗೆ ಮನೆಯಲ್ಲಿದ್ದ ಹಿಬಾಹ್, ರಾತ್ರಿ ವೇಳೆ 12ನೇ ಮಹಡಿಯ ಫ್ಲಾಟ್ ನಲ್ಲಿದ್ದ ಒಣಗಿಸಲು ಹಾಕಿದ ಬಟ್ಟೆಯನ್ನು ಕುರ್ಚಿಯನ್ನಿಟ್ಟು ತೆಗೆಯಲು ಮುಂದಾದಾಗ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾಳೆ. ಗಂಭೀರ ಗಾಯಗೊಂಡ ಬಾಲಕಿ ಹಿಬಾಹ್ ಐಮಾನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಬಟ್ಟೆ ಸುತ್ತಿದ ರೀತಿಯಲ್ಲಿ ವಿದ್ಯಾರ್ಥಿನಿ ಮೃತದೇಹ ಇದ್ದು, ಕೆಳಗೆ ಬೀಳುವ ಹೊತ್ತಿನಲ್ಲಿ ಬಟ್ಟೆ ಸುತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.