ನೆಲ್ಯಾಡಿ (ಉಪ್ಪಿನಂಗಡಿ): ಗೋಳಿತೊಟ್ಟು ಗ್ರಾಮದ ಕಡಮದಪಳಿಕೆ ಪರಿಸರದಲ್ಲಿ 4 ದಿನಗಳಿಂದ ಕಾಡಾನೆ ದಾಳಿ ಮಾಡುತ್ತಿದ್ದು, ಬೆಳೆ ಹಾನಿ ಮಾಡಿದೆ.
ಕಡಮದಪಳಿಕೆ ನಿವಾಸಿ ಸಾಗರ್, ಗುರುಪ್ರಸಾದ್ ಎಂಬುವರ ತೋಟದಲ್ಲಿ ಸುಮಾರು 26 ತೆಂಗಿನಮರ, 19 ಅಡಿಕೆ ಗಿಡ, 45ಕ್ಕೂ ಹೆಚ್ಚು ಬಾಳೆಗಿಡಗಳನ್ನು ನಾಶಗೊಳಿಸಿವೆ. ತೋಟದ ಸ್ಪ್ರಿಂಕ್ಲರ್ ಪೈಪ್‌ಗಳನ್ನು ಹಾನಿ ಮಾಡಿದೆ. ಪುತ್ತೂರು ವಲಯದ ಉಪ ವಲಯ ಅರಣ್ಯಾಧಿಕಾರಿ ಕಾಂತರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.