ADVERTISEMENT

ಉಳ್ಳಾಲ: ಹರ್ ಘರ್ ತಿರಂಗ ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2022, 5:16 IST
Last Updated 8 ಆಗಸ್ಟ್ 2022, 5:16 IST
ಸೋಮೇಶ್ವರ ದೇವಸ್ಥಾನದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸೋಮೇಶ್ವರ ದೇವಸ್ಥಾನದಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.   

ಉಳ್ಳಾಲ: ತೊಕ್ಕೊಟ್ಟು ಶ್ರೀಸಾಯಿ ಪರಿವಾರ್ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಘರ್ ಘರ್ ತಿರಂಗ ಅಭಿಯಾನಕ್ಕೆ ಉಳ್ಳಾಲ ಚಿರುಂಭ ಭಗವತಿ ದೇವಸ್ಥಾನ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್ ಚಾಲನೆ ನೀಡಿದರು.

ಕುಂಪಲ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಧ್ವಜ ಹಸ್ತಾಂತರ ಮಾಡಿದರು. ಬಿಜೆಪಿ ಮಹಿಳಾ ಮೋರ್ಚ ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ನಿವೃತ್ತ ಯೋಧ ಪ್ರವೀಣ್ ಶೆಟ್ಟಿ ಪಿಲಾರ್, ರಕ್ತೇಶ್ವರಿ ಬಳಗದ ರವಿಶಂಕರ್ ಸೋಮೇಶ್ವರ, ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ರಾಘವ ಗಟ್ಟಿ, ಬಿಜೆಪಿ ಹಿಂದುಳಿದ ವರ್ಗದ ರಾಜೇಶ್ ಉಳ್ಳಾಲ್, ದಯಾನಂದ ತೊಕ್ಕೊಟ್ಟು, ಸಾಯಿ ಪರಿವಾರ್ ಟ್ರಸ್ಟ್‌ನ ಪ್ರಮುಖರಾದ ಗಣೇಶ್ ಅಂಚನ್, ಪುರುಷೋತ್ತಮ ಕಲ್ಲಾಪು, ಸಂಪತ್ ಪಿಲಾರ್, ಸತೀಶ್ ಭಟ್‌ನಗರ, ಗಣೇಶ್ ಪಂಡಿತ್ ಮುಳಿಹಿತ್ಲು, ಅಶೋಕ್ ಉಚ್ಚಿಲ್, ಧೀರಜ್ ಗಟ್ಟಿ ಕೊಲ್ಯ, ಹಿತೇಶ್ ಉಳ್ಳಾಲಬೈಲ್, ಕೌಶಿಕ್ ಸೇವಂತಿಗುಡ್ಡೆ, ಶೈಲೇಶ್ ಸೇವಂತಿಗುಡ್ಡೆ, ರತ್ನಾಕರ ಉಳ್ಳಾಲ್, ಶವಿತ್ ಉಚ್ಚಿಲ್, ಸಂತೋಷ್ ಅಂಬ್ಲಮೊಗರು, ತಾರನಾಥ್ ತೊಕ್ಕೊಟ್ಟು, ದೀಪಕ್ ಬನಾರಿ, ಹರ್ಷರಾಜ್ ಕುಂಪಲ, ಅಭಿಷೇಕ್ ಆಚಾರ್ಯ, ಚರಣ್ ಕೃಷ್ಣನಗರ, ರಘುನಾಥ್ ಕುಲಾಲ್, ಉಮೇಶ್ ಕುತ್ತಾರ್, ರಂಜಿತ್ ತಲಪಾಡಿ, ಸತ್ಯಪ್ರಸಾದ್ ಬಗಂಬಿಲ, ಪ್ರವೀಣ್ ಸುವರ್ಣ, ಶಿವರಾಮ ಗಟ್ಟಿ ಎಕ್ಕೂರು, ಸತೀಶ್ ಚೆಂಬುಗುಡ್ಢೆ, ರಾಜೇಶ್ ಕಾಪಿಕಾಡ್, ರಾಜೇಶ್ ಧರ್ಮನಗರ, ಸಂಪತ್ ಧರ್ಮನಗರ, ರವಿ ಧರ್ಮನಗರ, ಪ್ರಸಾದ್‌‌ ಧರ್ಮನಗರ ಇದ್ದರು. 500 ರಾಷ್ಟ್ರಧ್ವಜವನ್ನು ನೀಡಲಾಯಿತು.

ಪ್ರವೀಣ್ ಎಸ್. ಕುಂಪಲ ಸ್ವಾಗತಿಸಿದರು. ಆಶಿಕ್ ಮಾಡೂರು ನಿರೂಪಿಸಿದರು. ಕೃಷ್ಣ ಪೊನ್ನತ್ತೋಡು ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.