ADVERTISEMENT

ಸೋಮೇಶ್ವರ ಪುರಸಭೆಯಿಂದ ಸಹಾಯವಾಣಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:33 IST
Last Updated 16 ಜುಲೈ 2020, 17:33 IST
ಸೋಮೇಶ್ವರ ಪುರಸಭೆಯಲ್ಲಿ ಕೊರೊನಾ ಸಹಾಯವಾಣಿಯನ್ನು ಆರಂಭಿಸಲಾಯಿತು. 
ಸೋಮೇಶ್ವರ ಪುರಸಭೆಯಲ್ಲಿ ಕೊರೊನಾ ಸಹಾಯವಾಣಿಯನ್ನು ಆರಂಭಿಸಲಾಯಿತು.    

ಉಳ್ಳಾಲ: ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ಕೋವಿಡ್–19 ಸೋಂಕಿತರ ಸಹಾಯಕ್ಕಾಗಿ ಸಹಾಯವಾಣಿ ಗುರುವಾರ ಆರಂಭಗೊಂಡಿದ್ದು, ರೋಗಿಗಳಿಗೆ ವೈದ್ಯರು ವಿಡಿಯೊ ಕಾಲ್ ಮೂಲಕ ಸಲಹೆ, ಮಾರ್ಗದರ್ಶನಗಳನ್ನು ನೀಡಲಿದ್ದಾರೆ ಎಂದು ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ವಾಣಿ ವಿ. ಆಳ್ವ ತಿಳಿಸಿದ್ದಾರೆ.

ಸೋಮೇಶ್ವರ ಪುರಸಭಾ ಕಚೇರಿಯಲ್ಲಿ ಕೊರೊನ ಸಹಾಯವಾಣಿಗೆ ಚಾಲನೆ ನೀಡಿ ಮಾತನಾಡಿದರು.

ಪುರಸಭಾ ವ್ಯಾಪ್ತಿಯಲ್ಲಿ ಸೋಂಕಿತರಲ್ಲಿ 10 ಜನರು ತಮ್ಮ ಮನೆಗಳಲ್ಲೇ ಪ್ರತ್ಯೇಕವಾಗಿ ಕ್ವಾರಂಟೈನ್‍ನಲ್ಲಿದ್ದು, ನಿತ್ಯ ಪುರಸಭಾ ಸಿಬ್ಬಂದಿ, ಆರೋಗ್ಯ ಸ್ಥಿತಿ, ಕ್ಷೇಮ ಸಮಾಚಾರ, ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ ಎಂದರು.

ADVERTISEMENT

ಗುರುವಾರ ಕೋಟೆಕಾರ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಆಶ್ಮಿಯ ಮತ್ತು ಡಾ.ಶರನ್ ಅವರು, ವಿಡಿಯೊ ಕಾಲ್ ಮೂಲಕ ಸೋಂಕಿತರೊಂದಿಗೆ ಚರ್ಚೆ ನಡೆಸಿದರು. ಶುಕ್ರವಾರ (ಇದೇ 17) ಯೇನೆಪೋಯ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ, ಸಹಾಯವಾಣಿ ಮೂಲಕ ಮನೆಯಲ್ಲೇ ಪ್ರತ್ಯೇಕವಾಗಿರಿಸಿದ ವ್ಯಕ್ತಿಗಳಿಗೆ ವಿಡಿಯೊ ಕಾಲ್ ಮೂಲಕ ಸಲಹೆ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.