ADVERTISEMENT

ಹೊಳಪು: ಉಪ್ಪಿನಂಗಡಿ ಗ್ರಾ.ಪಂ.ಗೆ 4 ಬಹುಮಾನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 6:31 IST
Last Updated 2 ಡಿಸೆಂಬರ್ 2022, 6:31 IST
ಕೋಟತಟ್ಟು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನಡೆದ ‘ಹೊಳ‍ಪು’ ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ 4 ಬಹುಮಾನ ಪಡೆದುಕೊಂಡಿದೆ.
ಕೋಟತಟ್ಟು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನಡೆದ ‘ಹೊಳ‍ಪು’ ಕ್ರೀಡೋತ್ಸವ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ 4 ಬಹುಮಾನ ಪಡೆದುಕೊಂಡಿದೆ.   

ಉಪ್ಪಿನಂಗಡಿ: ಉಡುಪಿ ಜಿಲ್ಲೆಯ ಕೋಟದ ಕೋಟತಟ್ಟು ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ನಡೆದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ‘ಹೊಳಪು-2022 ಜನಾಧಿಕಾರದ ಸಂಚಲನ’-ಕ್ರೀಡೊತ್ಸವ, ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ 4 ಬಹುಮಾನವನ್ನು ಪಡೆದುಕೊಂಡಿದೆ.

ಕ್ರೀಡಾಕೂಟದ ರಿಂಗ್ ಇನ್ ವಿಕೆಟ್‌ನಲ್ಲಿ ಪ್ರಥಮ ಬಹುಮಾನವನ್ನು ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಇಕ್ಬಾಲ್ ಮತ್ತು ದ್ವಿತೀಯ ಬಹುಮಾನವನ್ನು ಗ್ರಾಮ ಪಂಚಾಯಿತಿ ಸದಸ್ಯೆ ವನಿತಾ, ತೃತೀಯ ಬಹುಮಾನವನ್ನು ಸದಸ್ಯ ಸಂಜೀವ ಮಡಿವಾಳ ಯಾ ಸಣ್ಣಣ್ಣ ಪಡೆದುಕೊಂಡಿದ್ದಾರೆ.

200 ಮೀಟರ್ ಓಟದ ಸ್ಪರ್ಧೆಯಲ್ಲಿ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕಿ ಹೇಮಾ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ADVERTISEMENT

ಉಳಿದಂತೆ ಗಾಯನ ಪುರುಷ ವಿಭಾಗದಲ್ಲಿ ಪಂಚಾಯಿತಿ ಸದಸ್ಯ ಸುರೇಶ್ ಅತ್ರಮಜಲು, ಮಹಿಳಾ ವಿಭಾಗದಲ್ಲಿ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ ಸ್ಪರ್ಧಿಸಿದ್ದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಿನಾಯಕ ಪೈ, ಸದಸ್ಯರಾದ ಧನಂಜಯ, ಯು.ಕೆ. ಇಬ್ರಾಹಿಂ, ಅಬ್ದುಲ್ ರಶೀದ್, ಜಯಂತಿ, ಶೋಭಾ, ಉಷಾ ನಾಯ್ಕ್, ಸಿಬ್ಬಂದಿ ಜ್ಯೋತಿ, ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.