ADVERTISEMENT

ಬೆಳ್ತಂಗಡಿ: ಟೀಚರ್ಸ್ ಬ್ಯಾಂಕ್‌ನಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 27 ಮೇ 2025, 13:05 IST
Last Updated 27 ಮೇ 2025, 13:05 IST
ಬೆಳ್ತಂಗಡಿ ಟೀಚರ್ಸ್ ಕೊಆಪರೇಟೀವ್ ಬ್ಯಾಂಕ್‌ನಿಂದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು
ಬೆಳ್ತಂಗಡಿ ಟೀಚರ್ಸ್ ಕೊಆಪರೇಟೀವ್ ಬ್ಯಾಂಕ್‌ನಿಂದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು   

ಬೆಳ್ತಂಗಡಿ: ಟೀಚರ್ಸ್ ಕೊ–ಆಪರೇಟಿವ್ ಬ್ಯಾಂಕ್ ಉಡುಪಿ ಪ್ರಧಾನ ಕಚೇರಿಯ ಬೆಳ್ತಂಗಡಿ ಶಾಖೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಸನ್ಮಾನ ಹಾಗೂ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ ಸಿಬ್ಬಂದಿಗೆ ಗೌರವ ಪುರಸ್ಕಾರ ಸಮಾರಂಭ ನಡೆಯಿತು.

ಭಾರತೀಯ ಜೀವ ನಿಗಮ ಬೆಳ್ತಂಗಡಿ ಶಾಖೆಯ ಪ್ರಬಂಧಕ ಕೆ.ಪ್ರಕಾಶ್ ಅತಿಥಿಯಾಗಿದ್ದರು.

ಬ್ಯಾಂಕ್‌ ನಿರ್ದೇಶಕ ಧರಣೇಂದ್ರ ಕೆ.ಜೈನ್ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ನಿವೃತ್ತ ಪ್ರಾಂಶುಪಾಲ ಬಿ.ಎ.ಕುಮಾರ್ ಹೆಗ್ಡೆ ಉಜಿರೆ, ನಿವೃತ್ತ ಶಿಕ್ಷಕರಾದ ಪಂಚಾಕ್ಷರಪ್ಪ ಬೆಳ್ತಂಗಡಿ, ಸೀತಾರಾಮ ಗೌಡ ಅರಸಿನಮಕ್ಕಿ, ಕೃಷ್ಣಪ್ಪ ನಾಯ್ಕ ಕೊಕ್ರಾಡಿ, ವಿದ್ಯಾ ಕುಮಾರಿ ಪಿ.ಗಂಡಿಬಾಗಿಲು, ಲಿಯೋ ನೊರೊನ್ಹ ಮಡಂತ್ಯಾರು, ಬ್ಯಾಂಕ್‌ನ ಪ್ರಬಂಧಕ ಚೇತನ್ ಕುಮಾರ್ ಕೆ.ಎಂ. ಸಿಬ್ಬಂದಿ ಗಣೇಶ್, ಅನಿಲ್ ಕುಮಾರ್ ಕೆ.ಜಿ., ಮಧುಕರ್ ಶೆಟ್ಟಿ, ಸಂಧ್ಯಾ, ಸ್ವಾತಿ ಪೈ ಎನ್. ಅವರನ್ನು ಗೌರವಿಸಲಾಯಿತು.

ಸಾಲ ವಸೂಲಾತಿ ಅಧಿಕಾರಿ ನವೀನ್ ಶೆಟ್ಟಿ ಕಾರ್ಕಳ, ಶಾಖಾ ಪ್ರಬಂಧಕ ಚೇತನ್ ಕುಮಾರ್ ಕೆ.ಎಂ. ಭಾಗವಹಿಸಿದ್ದರು.

ಸಿಬ್ಬಂದಿ ಸಂಧ್ಯಾ ಪ್ರಾರ್ಥಿಸಿದರು. ನಿವೃತ್ತ ಪ್ರಬಂಧಕ ರವೀಂದ್ರ ಶೆಟ್ಟಿ ಬಳಂಜ ಸ್ವಾಗತಿಸಿ, ವಂದಿಸಿದರು.

ಟೀಚರ್ಸ್ ಕೊ–ಆಪರೇಟಿವ್ ಬ್ಯಾಂಕ್ 21,780 ಸದಸ್ಯತ್ವ ಹೊಂದಿದ್ದು, ಬೆಳ್ತಂಗಡಿ ಶಾಖೆಯು 1,100 ಸದಸ್ಯರನ್ನು ಹೊಂದಿದೆ. ಶಾಖೆಯ ಠೇವಣಿ ₹ 26 ಕೋಟಿ, ಶಾಖೆಯ ಸಾಲ ಪಾವತಿ ₹ 12 ಕೋಟಿ ಇದ್ದು, ಶೇ 100 ವಸೂಲಾತಿ ಇದೆ. 14 ಶಾಖೆಗಳಿದ್ದು, 110 ಉದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ₹ 586 ಕೋಟಿ ಬ್ಯಾಂಕ್‌ ಠೇವಣಿ ಹೊಂದಿದ್ದು, ₹ 454 ಕೋಟಿ ಬ್ಯಾಂಕಿನ ಸಾಲ ಪಾವತಿಗಳಿವೆ ಹಾಗೂ ಒಟ್ಟು ವ್ಯವಹಾರ ₹ 1,050 ಕೋಟಿ ಇದೆ ಎಂದು ಧರಣೇಂದ್ರ ಕೆ.ಜೈನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.