ADVERTISEMENT

ಮಂಗಳೂರು | ವಿಶಾಲ ವಾರ್ಡ್‌; ಸರ್ವಿಸ್ ರಸ್ತೆಯ ಭಾಗ್ಯಕ್ಕಾಗಿ ಕಾಯುತ್ತ...

ರಾಷ್ಟ್ರೀಯ ಹೆದ್ದಾರಿ ಅಂಚಿನ ವಿಶಾಲ ವಾರ್ಡ್‌; ವಾಹನ ಅಪಘಾತದ ಆತಂಕ ಮಡಿಲ ಕೆಂಡ

​ಪ್ರಜಾವಾಣಿ ವಾರ್ತೆ
Published 10 ಮೇ 2025, 6:27 IST
Last Updated 10 ಮೇ 2025, 6:27 IST
ಸರ್ವಿಸ್ ರಸ್ತೆ ಇಲ್ಲದ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ
ಸರ್ವಿಸ್ ರಸ್ತೆ ಇಲ್ಲದ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ   

ಮಂಗಳೂರು: ಸೂಕ್ಷ್ಮವಾಗಿ ಕಿವಿ ಕೊಟ್ಟರೆ ಕೇಳುವ ಸಮುದ್ರದ ಭೋರ್ಗರೆತ, ತಲೆ ಎತ್ತಿ ಸುತ್ತ ಕಣ್ಣಾಡಿಸಿದರೆ ಕಾಣಿಸುವ ಕಾರ್ಖಾನೆಗ ಹೊಗೆ,   ಒಳಗಿನ ಪ್ರದೇಶಗಳಲ್ಲಿ ಮನೆಮಾಡಿಕೊಂಡವರಿಗೆ ಶಾಂತ ವಾತಾವರಣ. ರಸ್ತೆಯ ಬದಿಗೆ ಬಂದರೆ ವಾಹನಗಳ ಸದ್ದು, ಒಂದು ಬದಿಯಲ್ಲಿ ಉದ್ದಕ್ಕೂ ಚಾಚಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ. ಈ ಹೆದ್ದಾರಿ ಬದಿಯಲ್ಲೇ ಆತಂಕವೂ ಕಾದಿದೆ.

ರಾಷ್ಟ್ರೀಯ ಹೆದ್ದಾರಿಯ ಹೊಸಬೆಟ್ಟು ಜಂಕ್ಷನ್‌ನಿಂದ ಸುರತ್ಕಲ್ ವರೆಗೆ ಚಾಚಿಕೊಂಡಿರುವ, ಮತ್ತೊಂದೆಡೆ ಕೈಗಾರಿಕೆಗಳು ಹಾಗೂ ಮಲೆನಾಡನ್ನು ಹೋಲುವ ಹಸಿರಿನ ಆವರಣ ಹೊಂದಿರುವ ಹೊಸಬೆಟ್ಟು ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ವಾಸ ಮಾಡುತ್ತಿರುವವರ ಪೈಕಿ ಬಹುತೇಕರು ವಿವಿಧ ಕಂಪನಿಯ ಉದ್ಯೋಗಿಗಳು ಮತ್ತು ಸುಶಿಕ್ಷಿತರು. ಇವರೆಲ್ಲರಿಗೂ ಹೆದ್ದಾರಿಗೆ ಇಳಿಯಲು ಭಯ. ಅದಕ್ಕೆ ಕಾರಣ ಸರ್ವಿಸ್‌ ರಸ್ತೆ ಇಲ್ಲದೇ ಇರುವುದು.

ಮಂಗಳೂರು ಮತ್ತು ಸುರತ್ಕಲ್ ನಡುವಿನ ಪ್ರಮುಖ ಪ್ರದೇಶಗಳಲ್ಲಿ ಒಂದು ಹೊಸಬೆಟ್ಟು. ವಿಸ್ತಾರವಾದ, ಸುಂದರ ರಾಷ್ಟ್ರೀಯ ಹೆದ್ದಾರಿಯೇ ಇಲ್ಲಿನ ಪ್ರಮುಖ ಆಕರ್ಷಣೆ. ಆದರೆ ಹೆದ್ದಾರಿ ಬದಿಯಲ್ಲಿ ಸರ್ವಿಸ್ ರಸ್ತೆ ಬೇಕು ಎಂಬ ಬಹುಕಾಲದ ಬೇಡಿಕೆ ಇನ್ನೂ ಈಡೇರಲಿಲ್ಲ. ಇಲ್ಲಿನ ಹಲವಾರು ಸಮಸ್ಯೆಗಳು ಸರ್ವಿಸ್ ರಸ್ತೆ ಬೇಡಿಕೆಯ ಜೊತೆಯಲ್ಲೇ ಮಿಳಿತವಾಗಿವೆ ಎಂಬುದು ಜನರ ಅಭಿಪ್ರಾಯ. ಸರ್ವಿಸ್ ರಸ್ತೆ ಇಲ್ಲದ್ದರಿಂದ ಈ ಭಾಗದಲ್ಲಿ ಅಪಘಾತಗಳು ಸಾಮಾನ್ಯ ಎಂಬಂತಾಗಿದೆ. ಬಸ್‌ಗಳನ್ನು ಹೆದ್ದಾರಿಯ ಅಂಚಿನಲ್ಲೇ ನಿಲ್ಲಿಸುವುದರಿಂದ ಹತ್ತುವ, ಇಳಿಯುವ ‘ಸಾಹಸ’ವನ್ನು ಭಯದಿಂದಲೇ ಮಾಡಬೇಕಾಗುತ್ತದೆ. ಸರ್ವಿಸ್ ರಸ್ತೆ ಇಲ್ಲದ್ದರಿಂದ ಹೆದ್ದಾರಿ ಬದಿಯಲ್ಲಿ ಚರಂಡಿ ಇಲ್ಲ. ಹೀಗಾಗಿ ಮಳೆಗಾಲದಲ್ಲಿ ಅನೇಕ ಭಾಗಗಳು ‘ನೆರೆ ಪ್ರದೇಶ’ವಾಗುತ್ತವೆ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಇಲ್ಲಿ ಸರ್ವಿಸ್‌ ರಸ್ತೆಗೆ ಜಾಗದ ಕೊರತೆ ಏನೂ ಇಲ್ಲ. ಆದ್ದರಿಂದ ಭೂಸ್ವಾದೀನದ ಸವಾಲೂ ಇಲ್ಲ. ಆದರೂ ಅದಕ್ಕೆ ಕ್ರಿಯಾಯೋಜನೆಯೊಂದು ಸಿದ್ಧ ಆಗುತ್ತಲೇ ಇಲ್ಲ. ವಾರ್ಡ್ ಅಭಿವೃದ್ಧಿಗೆ ಒಟ್ಟು ₹ 35 ಕೋಟಿ ಮೊತ್ತ ಈಚೆಗೆ ಬಿಡುಗಡೆ ಆಗಿದೆ. ಅದರಲ್ಲಿ ಆಗಬೇಕಾದ ಕಾಮಗಾರಿಯಲ್ಲಿ ಮರು ಡಾಂಬರೀಕರಣ ಮತ್ತು ರಸ್ತೆ ವಿಭಜಕಗಳ ನಿರ್ಮಾಣದ ಪ್ರಸ್ತಾಪ ಇದೆ. ಸರ್ವಿಸ್ ರಸ್ತೆಗೂ ಅವಕಾಶ ಇದ್ದರೆ ಅನುಕೂಲ ಆಗುತ್ತಿತ್ತು ಎನ್ನುತ್ತಾರೆ ಮಹಾನಗರ ಪಾಲಿಕೆಯಲ್ಲಿ ಈ ವಾರ್ಡ್‌ನ ಪ್ರತಿನಿಧಿ ಆಗಿದ್ದ ವರುಣ್ ಚೌಟ.

‘ಇಲ್ಲಿ ಸರ್ವಿಸ್ ರಸ್ತೆ ಆಗಲೇಬೇಕು. ಇಲ್ಲವಾದರೆ ಅ‍ಪಘಾತಗಳನ್ನು ತಡೆಯುವುದು ಸವಾಲಿನ ಕೆಲಸ ಅಗಲಿದೆ. ಶಾಸಕರು ಮತ್ತು ಸಂಸದರಿಗೆ ಈ ವಿಷಯವನ್ನು ಮನದಟ್ಟು ಮಾಡಿಕೊಡಲಾಗಿದೆ. ಭರವಸೆಯಿಂದಲೇ ಕಾಯುತ್ತಿದ್ದೇವೆ’ ಎಂದು ವರುಣ್ ಹೇಳಿದರು.

'ಮಾರುತಿ ನಗರದಿಂದ ಸುರತ್ಕಲ್ ವರೆಗೆ ಸರ್ವಿಸ್ ರಸ್ತೆ ಇದೆ.ಅದನ್ನು ಇನ್ನೂ ಮುಂದಕ್ಕೆ ವಿಸ್ತರಿಸಬೇಕಾಗಿತ್ತು. ಅದನ್ನು ಮಾಡಲಿಲ್ಲ. ಈ ಭಾಗದಲ್ಲಿ ವಸತಿ ಪ್ರದೇಶಗಳೇ ಹೆಚ್ಚು ಇದ್ದು ಸರ್ವಿಸ್‌ ರಸ್ತೆ ಅತ್ಯಗತ್ಯವಾಗಿ ಬೇಕು. ಹೆದ್ದಾರಿಯ ಬದಿಯೂ ಸರಿ ಇಲ್ಲ. ರಸ್ತೆಗೆ ಅಲ್ಲಲ್ಲಿ ತೇಪೆ ಹಾಕಿದ್ದು ವಾಹನಗಳು ಹಾಳಾಗುತ್ತಿವೆ. ಅಪಘಾತ ಸಂಭವಿಸಿದರೆ ಒಂದು ವಾರ ಪೊಲೀಸರು ಇಲ್ಲಿ ನಿಲ್ಲುತ್ತಾರೆ. ಮತ್ತೆ ಯಥಾವತ್ ಸಮಸ್ಯೆಗಳು ಉಳಿಯುತ್ತವೆ. ಹೊನ್ನಕಟ್ಟೆಯಲ್ಲಿ ದೊಡ್ಡ ವಾಹನಗಳಿಗೆ ಯು–ಟರ್ನ್ ಅವಕಾಶ ಇಲ್ಲ. ಆದ್ದರಿಂದ ವಾಹನಗಳು ಹೊಸಬೆಟ್ಟು ಜಂಕ್ಷನ್‌ಗೆ ಬರಬೇಕಾಗುತ್ತದೆ. ಇಲ್ಲಿ ಅಪಘಾತ ಸಂಭವಿಸಲು ಯು–ಟರ್ನ್ ಕೂಡ ಕಾರಣ ಎಂದು ಆಟೊ ಚಾಲಕ ಸುದೇಶ್ ತಿಳಿಸಿದರು.

 
 
ಪೂರ್ತಿ ರೆಸಿಡೆನ್ಸಿ ಯಲ್ ಏರಿಯಾ ಕೆಲವು ಅಂಗಡಿಗಳು. ಹಳೆಯ ಬಡಾವಣೆ. ನೀರು ಹರಿಯುತ್ತಿರಲಿಲ್ಲ. ಈಚೆಗೆ ಅಭಿವೃದ್ಧಿಎನ್ ಎಂಪಿಟಿ ಕಾಲನಿ ಪ್ರಗತಿ ಕಾಲನಿ ವರೆಗೆ ಕಾಂಕ್ರಿಟೀಕರಣ. ಎಮ್ ಎಂಒಇಟಿ ಕಾಲನಿಯಿಂದ ಬಸ್ ನಿಲ್ದಾಣ ವರೆಗೆ ಒಳಚರಂಡಿ ನಿರ್ಮಾಣ.
108 ಕ್ಯಾಮೆರಾ ಹಾಕಲಾಗುವುದು.

ಬಡಾವಣೆಯಲ್ಲಿ ಒಟ್ಟು ₹ 35 ಕೋಟಿ ವೆಚ್ಚದ ಕೆಲಸ ಆಗಿದೆ. ತಲಾ 108 ಸಿಸಿಟಿವಿ ಕ್ಯಾಮೆರಾ ಮತ್ತು ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. 20 ದಿನ ಆಗಬಹೂದ. ಭದ್ರತೆ ಮತ್ತು ಕಸ ಎಸೆಯುವುದನದನು ತಡೆಯಲು. ಹಿಂದೆ 8ರಿಂದ 9 ಬ್ಕ್ಯಾಕ್ ಸ್ಪಾಟ್ ಗಳಿದ್ದವು. ಈಗ ಇಲ್ಲವೇ ಇಲ್ಲ. ಆದರೂ ಕಣ್ಣು ಇಡುವುದ್ಖಾಗಿ ಕ್ಯಾಮೆರಾ.ಗೋವಿಂದ ದಾಸ ಕಾಲೇಜು ಬಳಿ ಸ್ಮಾರ್ಟ್ ಬಸ್ ನಿಲ್ದಾಣ. ವೈಫೈ, ಸಿಸಿಟಿವಿ ಕ್ಯಾಮೆರಾ ಕುಡಿಯುವ ನೀರು, ಫ್ಯಾನ್, ಪ್ರಥಮ ದರ್ಜೆ ಬಾಕ್ಸ್. ಪಕ್ಕದ ಮೆಡಿಕಲ್. Sos. ಬಟನ್ ವಿಶೇಷ ವಾಗಿ ಮಹಿಖೆಯರಿಗೆ.ಕೋಡಿಕೆರೆಯಲ್ಲಿ ಶಿವಾಜಿ ಪ್ರತಿಮೆ ಮತ್ತು ವೃತ್ತ ಆಗಿದೆ. ಜಲಸಿರಿ, ಗೇಲ್ ಗ್ಯಾಸ್ ಸಂಪರ್ಕ ಕೆಲವು‌ ಕಡೆ ಪ್ರಾಯೋಗಿಕವಾಗಿ ಆಗಿದೆ.

ವಾರ್ಡ್ ವಿಶೇಷ

ಸುರತ್ಕಲ್ ಪಟ್ಟಣ, ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶಗಳನ್ನು ಒಳಗೊಂಡ ವಾರ್ಡ್‌ನ ಒಂದು ಭಾಗದಲ್ಲಿ ಜನವಸತಿಯೇ ಹೆಚ್ಚು.  ಹೊಸಬೆಟ್ಟು ಜಂಕ್ಷನ್‌ನ ಕೋರ್ದಬ್ಬು ದೈವಸ್ಥಾನ, ಮೂಡುಪಟ್ನದ ಜಾರಂದಾಯ ಗುಡಿ, ಕಾನ ಮತ್ತು ಸುರತ್ಕಲ್ ಮಸೀದಿ, ಸೇಕ್ರೆಡ್ ಹಾರ್ಟ್ ಚರ್ಚ್‌ ಮುಂತಾದವು ಇರುವುದು ಇದೇ ವಾರ್ಡ್‌ನಲ್ಲಿ. 

ಎಸ್‌ಇಝಡ್‌ಗಾಗಿ ಜಾಗ ಕಳೆದುಕೊಂಡವರಿಗೆ ಪರಿಹಾರ ರೂಪದಲ್ಲಿ ನೀಡಿರುವ ಜಾಗ ಇಲ್ಲೇ ಇದ್ದು ಕೋಡಿಕೆರೆ ಭಾಗದಲ್ಲಿ ಅವರಿಗಾಗಿ 300 ಮನೆಗಳನ್ನು ಕಟ್ಟಿಕೊಡಲಾಗಿದೆ. ಈ ಕಾಲೊನಿಯಲ್ಲಿ 300ರಷ್ಟು ಮನೆಗಳು ಇವೆ. ನಾಗಾರ್ಜುನ ಪದ್ಧತಿಗಾಗಿ ಕೆಐಎಡಿಬಿ ವಶಪಡಿಸಿಕೊಂಡ ಜಾಗಕ್ಕೆ ಬದಲು ಕಾನದಲ್ಲಿ ನೀಡಿರುವ ಜಾಗದಲ್ಲಿ ನಿರ್ಮಾಣ ಆಗಿರುವ ಕಾಲನಿಯಲ್ಲಿ 200ರಷ್ಟು ಮನೆಗಳು ಇವೆ.

ಈ ಹಿಂದೆ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಇತ್ತು. ಪಂಪ್ ಬದಲಿಸಿ ಅದಕ್ಕೆ ಪರಿಹಾರ ಕಾಣಲಾಗಿದೆ. ನಾಗರಿಕರ ಹಿತರಕ್ಷಣಾ ವೇದಿಕೆ ಸಕ್ರಿಯವಾಗಿದ್ದು ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆ.

ಅಶೋಕ್ ಅಂಗಡಿ ಮಾಲೀಕ ಹೊಸಬೆಟ್ಟು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.