ADVERTISEMENT

ಮೂಳೂರು ಕಡಲ ತೀರದಲ್ಲಿ ಭಾರೀ ಗಾತ್ರದ ತೊರಕೆ ಮೀನು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 15:43 IST
Last Updated 1 ಅಕ್ಟೋಬರ್ 2022, 15:43 IST
   

ಕಾಪು: ಕಾಪು ಸಮೀಪದ ಮೂಳೂರು ಕಡಲ ತೀರದಲ್ಲಿ ಮೀನುಗಾರರ ಬಲೆಗೆ ನೂರಾರು ತೊರಕೆ ಮೀನುಗಳು ಬಿದ್ದಿದ್ದು ಮತ್ಸ್ಯ ಪ್ರಿಯರ ಸಂಭ್ರಮಕ್ಕೆ ಕಾರಣವಾಗಿದೆ.

ಮೀನುಗಾರರ ಬಲೆಗೆ ದೊಡ್ಡ ದೊಡ್ಡ ತೊರಕೆಗಳು ಬಿದ್ದಿದ್ದು ,ಒಂದೊಂದು ಮೀನು ಸುಮಾರು 50 ಕೆಜೆ ಯಷ್ಟು ತೂಗುತ್ತಿವೆ.ಸ್ಥಳೀಯವಾಗಿ ತೊರಕೆ ಎಂದು ಕರೆಯಲ್ಪಡುವ ಈಮೀನುಗಳನ್ನು ನೋಡಲೆಂದೇ ನೂರಾರು ಮಂದಿ ಕಡಲತೀರದತ್ತ ದೌಡಾಯಿಸಿದ್ದಾರೆ.ಬಲೆಗೆ ಬಿದ್ದ ಮೀನುಗಳನ್ನು ದೊಡ್ಡ ಬಡಿಗೆಯಲ್ಲಿ ಮೀನನ್ನು ಕಟ್ಟಿ ಹರಸಾಹಸದ ಮೂಲಕ ಮೇಲಕ್ಜೆತ್ತಬೇಕಾಯಿತು.ತೊರಕೆ ಮೀನಿಗೆ ಕೆಜಿಗೆ 250 ರಿಂದ 300 ರುಪಾಯಿಯಷ್ಟು ದರ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT