
ಸುಬ್ರಹ್ಮಣ್ಯ: ಭಕ್ತಿಯ ಆರಾಧನೆ ಭಗವಂತನಿಗೆ ಪ್ರಿಯವಾಗಿದೆ. ಮಾನವೀಯ ಧರ್ಮವು ಸರ್ವರಲ್ಲೂ ಬೇರೂರಿರಬೇಕು ಎಂದು ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು.
ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಮಹೋತ್ಸವದ ಅಂಗವಾಗಿ ನಡೆದ ಧರ್ಮಸಮ್ಮೇಳನದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಬಾರ್ಕೂರು ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ವಿಶ್ವಸಂತೋಷ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ವಹಿಸಿದ್ದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧ್ಯಕ್ಷ ನಿಕೇತ್ ರಾಜ್ ಮೌರ್ಯ ಧಾರ್ಮಿಕ ಉಪನ್ಯಾಸ ನೀಡಿದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಕಲ್ಲಾಜೆ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ರಾಜಗುರು ದ್ವಾರಕಾನಾಥ್ ಗೂರೂಜಿ, ರವಿ ಶಂಕರ ಶೆಟ್ಟಿ, ಉದ್ಯಮಿ ಕಿರಣ್ ಬುಡ್ಲೆಗುತ್ತು, ವಕೀಲ ಎಂ.ವೆಂಕಪ್ಪ ಗೌಡ, ಗೋಕರ್ಣನಾಥ ದೇವಸ್ಥಾನದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್ ಆರ್., ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಅತಿಥಿಗಳಾಗಿದ್ದರು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಇಒ ಅರವಿಂದ ಎ.ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಡಾ.ರಘು, ಲೀಲಾ ಮನಮೋಹನ್, ಪ್ರವೀಣಾ ರೈ ಮರುವಂಜ, ಸೌಮ್ಯಾ ಭರತ್, ಅಜಿತ್ ಕುಮಾರ್, ಕಡಬ ತಾಲ್ಲೂಕು ಕೆಡಿಪಿ ಸದಸ್ಯ ಶಿವರಾಮ ರೈ, ಮಾಸ್ಟರ್ ಪ್ಲ್ಯಾನ್ ಸಮಿತಿ ಸದಸ್ಯರಾದ ಅಚ್ಯುತ ಆಲ್ಕಬೆ, ಪವನ್ ಎಂ.ಡಿ., ಸತೀಶ್ ಕೂಜುಗೋಡು, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ವೈ.ರಾಜ್ ಭಾಗವಹಿಸಿದ್ದರು.
ಉಪನ್ಯಾಸಕಿ ಶ್ರುತಿ ಅಶ್ವಥ್ ನಿರೂಪಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ, ದೇವಳದ ಸಿಬ್ಬಂದಿ ಅಶೋಕ್ ಅತ್ಯಡ್ಕ, ಪವನ್ ಕುಮಾರ್ ಬನ, ದೇವಿಪ್ರಸಾದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.