ADVERTISEMENT

ಪಾಲಿಸಿದಾರರಿಗೆ ಐಸಿಐಸಿಐನಿಂದ ₹788 ಕೋಟಿ ಬೋನಸ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2020, 11:47 IST
Last Updated 21 ಜೂನ್ 2020, 11:47 IST
ಐಸಿಐಸಿಐ
ಐಸಿಐಸಿಐ   

ಮಂಗಳೂರು: ಐಸಿಐಸಿಐ ಪ್ರುಡೆನ್ಷಿಯಲ್ ಲೈಫ್ ಇನ್ಶೂರೆನ್ಸ್ ಪಾಲ್ಗೊಳ್ಳುವಿಕೆ ಉತ್ಪನ್ನ ಶ್ರೇಣಿಗಾಗಿ ಒಟ್ಟು ₹788 ಕೋಟಿ ಬೋನಸ್ ಘೋಷಿಸಿದೆ.

ಮಾರ್ಚ್ 31ರವರೆಗೆ ಚಾಲ್ತಿಯಲ್ಲಿರುವ ಎಲ್ಲ ಪಾಲಿಸಿದಾರರು ಈ ಬೋನಸ್ ಪಡೆಯಲು ಅರ್ಹರಾಗಿರತ್ತಾರೆ. ಇದನ್ನು ಅವರ ಖಾತರಿಪಡಿಸಿದ ಪರಿಪಕ್ವತಾ ಮೌಲ್ಯ ಅಥವಾ ಮರಣ ಪ್ರಯೋಜನದ ಮೊತ್ತಕ್ಕೆ ಸೇರಿಸಲಾಗುತ್ತದೆ. ಕಂಪನಿ ಬೋನಸ್ ಘೋಷಿಸುತ್ತಿರುವುದು ಇದು ಸತತ 14ನೇ ವರ್ಷವಾಗಿದ್ದು, ಇದನ್ನು ದೀರ್ಘಾವಧಿ ಮೌಲ್ಯವಾಗಿ ಪಾಲಿಸಿದಾರರಿಗೆ ವಿತರಿಸಲಾಗಿದೆ.

ಈ ಬಾರಿ ಘೋಷಿಸಿರುವ ಬೋನಸ್ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿದ ಬೋನಸ್‌ಗಿಂತ ಶೇ 15ರಷ್ಟು ಅಧಿಕವಾಗಿದ್ದು, 9 ಲಕ್ಷ ಪಾಲಿಸಿದಾರರು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಎಸ್.ಕಣ್ಣನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.