ಬಂಧನ
(ಪ್ರಾತಿನಿಧಿಕ ಚಿತ್ರ)
ಮಂಗಳೂರು: ತೆಂಕ ಎಡಪದವು ಗ್ರಾಮದ ಗುಡ್ಡ ಒಡೆಯಲು ಅನುಮತಿ ಇಲ್ಲದೇ ಸ್ಫೋಟಕಗಳನ್ನು ಕಲ್ಲುಗಳ ನಡುವೆ ಅಳವಡಿಸಿದ್ದ ಹಾಗೂ ಸ್ಫೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜಾರ್ಖಂಡ್‌ನ ಸಾಹೀಬ್ ಗಂಜ್ ಜಿಲ್ಲೆಯ ಕಲ್ಯಾಣ್‌ಚಕ್‌ನ ಚೋಟಾ ಕಾರ್ತಿಕ್ ದಂಗಾದ ಬಿಬಯ್ ಅರ್ನವ್ ( 36 ವರ್ಷ) ಸ್ಫೋಟಕಗಳನ್ನು ಅಳವಡಿಸಿದ್ದ ಆರೋಪಿ. ಎರಡು ಚೀಲಗಳಲ್ಲಿ ತುಂಬಿಸಿಟ್ಟಿದ್ದ 245 ಜಿಲೆಟಿನ್ ಕಡ್ಡಿಗಳು ಹಾಗೂ 112 ಎಲೆಕ್ಟ್ರಾನಿಕ್ ಡಿಟೋನೇಟರ್‌ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟಕ ಬಳಕೆಗೆ ಸಂಬಂಧಿಸಿದ ಯಾವುದೇ ದಾಖಲಾತಿಗಳು ಆತನ ಬಳಿ ಇರಲಿಲ್ಲ. ಅನುಮತಿ ಇಲ್ಲದೆಯೇ ಆತ ಸ್ಫೋಟಕಗಳನ್ನು ಮನುಷ್ಯನ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ. ಈ ಬಗ್ಗೆ ಸ್ಥಳೀಯರು ನೀಡಿದ್ದ ಮಾಹಿತಿ ಆಧರಿಸಿ ಬಜಪೆ ಠಾಣೆಯ ಪೊಲೀಸರು ಮಂಗಳವಾರ ಸ್ಥಳಕ್ಕೆ ಧಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.