ADVERTISEMENT

ರಾತ್ರಿ ಮನೆಗೆ ಬಂದು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಇನ್‌ಸ್ಟಾದ ಪರಿಚಿತ ಬಾಲಕ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 5:38 IST
Last Updated 4 ಸೆಪ್ಟೆಂಬರ್ 2022, 5:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಬಾಲಕನೊಬ್ಬ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಪ್ರೌಢಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡಿಕೊಂಡಿರುವ 16 ವರ್ಷದ ಬಾಲಕಿಗೆ ವರ್ಷಗಳ ಹಿಂದೆ ಇನ್‌ ಸ್ಟಾಗ್ರಾಂ ಮೂಲಕ ಬಾಲಕನೊಬ್ಬನ (17 ವರ್ಷ) ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಬಾಲಕನು ಮೊಬೈಲ್‌ನಲ್ಲಿ ಬಾಲಕಿಗೆ ಸಂದೇಶ ಕಳುಹಿಸಿ ಆಕೆಯ ಮನೆಗೆ ಬರುವುದಾಗಿ ತಿಳಿಸುತ್ತಿದ್ದನು ಆ.13 ರಂದು ರಾತ್ರಿ ಬಾಲಕಿಗೆ ಸಂದೇಶ ಕಳುಹಿಸಿದ್ದ ಬಾಲಕ, ‘ನಾನು ಮನೆಗೆ ಬರುತ್ತಿದ್ದೇನೆ ನೀನು ಬಾಗಿಲು ತೆಗೆಯಬೇಕು. ಇಲ್ಲದಿದ್ದರೆ ಮನೆಯವರ ಮುಂದೆ ಗಲಾಟೆ ಮಾಡುತ್ತೇನೆ’ ಎಂದು ಹೆದರಿಸಿದ್ದ. ಅಂದು ಎಲ್ಲರೂ ಮಲಗಿದ ನಂತರ ರಾತ್ರಿ 12ರ ವೇಳೆ ಆಕೆಯ ಮನೆಗೆ ಬಂದಿದ್ದ. ಬಾಲಕಿ ಮೇಲೆ ಬಲವಂತದಿಂದ ನಾಲ್ಕೈದು ಸಲ ಲೈಂಗಿಕ ದೌರ್ಜನ್ಯ ನಡೆಸಿದ್ದ. ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ಕೊಲ್ಲದೇ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದ.’

‘ಇದೇ ರೀತಿ ಸೆ.‌02ರಂದು ಬಾಲಕಿಗೆ ಮತ್ತೆ ಕರೆ ಮಾಡಿದ ಬಾಲಕ ರಾತ್ರಿ ಮನೆಗೆ ಬರುವುದಾಗಿ ತಿಳಿಸಿದ್ದ. ಬೇಡವೆಂದು ಬಾಲಕಿ ಅಂಗಲಾಚಿದರೂ ಕೇಳದೇ ರಾತ್ರಿ 11.50 ಗಂಟೆಗೆ ಮನೆಯವರೆಲ್ಲ ಮಲಗಿದ್ದ ಹೊತ್ತಲ್ಲಿ ಮನೆಯೊಳಗೆ ಬಂದು ಮತ್ತೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ’ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ADVERTISEMENT

ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಬಾಲಕ ನಾಪತ್ತೆಯಾಗಿದ್ದು ಆತನ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.