ADVERTISEMENT

ಕೋವಿಡ್‌: ಬೋಳೂರು ಪ್ರದೇಶಕ್ಕೆ ಐವನ್ ಭೇಟಿ

136 ಮನೆಗಳಿದ್ದು, ಸಾಕಷ್ಟು ಜನರಿಗೆ ಸಂಕಷ್ಟ, ಸಹಾಯ ಮಾಡುವ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಮೇ 2020, 11:43 IST
Last Updated 3 ಮೇ 2020, 11:43 IST
ಮಂಗಳೂರಿನ ಬೋಳೂರು ಪ್ರದೇಶಕ್ಕೆ ಶನಿವಾರ ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ ಭೇಟಿ ನೀಡಿದರು.
ಮಂಗಳೂರಿನ ಬೋಳೂರು ಪ್ರದೇಶಕ್ಕೆ ಶನಿವಾರ ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ ಭೇಟಿ ನೀಡಿದರು.   

ಮಂಗಳೂರು: ಕೋವಿಡ್‌–19 ಸೋಂಕು ಪತ್ತೆಯಾಗಿದ್ದರಿಂದ ಸೀಲ್‌ಡೌನ್‌ ಮಾಡಲಾಗಿರುವ ಬೋಳೂರು ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಐವನ್‌ ಡಿಸೋಜ ಶನಿವಾರ ಭೇಟಿ ನೀಡಿ, ಅಲ್ಲಿನ ಜನರ ಜತೆಗೆ ಚರ್ಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪ್ರದೇಶದಲ್ಲಿ ಸುಮಾರು 136 ಮನೆಗಳಿದ್ದು, ಸಾಕಷ್ಟು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರಿಗೆ ಸಹಾಯ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.

ಈ ಪ್ರದೇಶದಲ್ಲಿ ಕೂಲಿಕಾರ್ಮಿಕರು, ಬಡಜನರು ಹೆಚ್ಚಾಗಿದ್ದು, ಅವರಿಗೆ ದಿನನಿತ್ಯದ ಸಾಮಗ್ರಿಗಳನ್ನು ಒದಗಿಸಬೇಕಾಗಿದೆ.

ADVERTISEMENT

ದಾನಿಗಳು ಈ ಸಂದರ್ಭದಲ್ಲಿ ಹಾಲು, ದಿನಸಿ ಸಾಮಗ್ರಿ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ನೆರವಿನ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು.

‘ಶಾಸಕನಾಗಿ ಏನೆಲ್ಲ ಸಹಾಯ ಮಾಡಬಹುದೋ, ಅದನ್ನೆಲ್ಲ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ’ ಎಂದು ಐವನ್‌ ಡಿಸೋಜ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.