ADVERTISEMENT

ಜಯಪುರ | ಚಿರತೆ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 2 ಮೇ 2025, 16:03 IST
Last Updated 2 ಮೇ 2025, 16:03 IST
ಬಾಳೆಹೊನ್ನೂರು ಸಮೀಪದ ಬೆತ್ತದಕೊಳಲು ಬಳಿ ಕಾಣಿಸಿಕೊಂಡಿದ್ದ ಚಿರತೆ
ಬಾಳೆಹೊನ್ನೂರು ಸಮೀಪದ ಬೆತ್ತದಕೊಳಲು ಬಳಿ ಕಾಣಿಸಿಕೊಂಡಿದ್ದ ಚಿರತೆ   

ಜಯಪುರ (ಬಾಳೆಹೊನ್ನೂರು): ಅತ್ತಿಕುಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆತ್ತದಕೊಳಲು ಗ್ರಾಮದ ದೊಡ್ಡಬಿಳಾಲುವಿನಲ್ಲಿ ರಾತ್ರಿ ವಾಹನದಲ್ಲಿ ಹೋಗುತ್ತಿದ್ದವರಿಗೆ ರಸ್ತೆ ಬದಿಯಲ್ಲಿ ಚಿರತೆ ಕಂಡಿದೆ.

ರಾತ್ರಿ ಟಿಟಿ ವಾಹನದಲ್ಲಿ ಹೋಗುತ್ತಿದ್ದವರಿಗೆ ಚಿರತೆ ಕಂಡಿದ್ದು, ಅವರು ಮೊಬೈಲ್‌ ಫೋನ್‌ನಲ್ಲಿ ಚಿರತೆಯ ಚಿತ್ರ ತೆಗೆದಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೊಂಡ ಇರುವ ಈ ಗ್ರಾಮದ ರಸ್ತೆಯಲ್ಲಿ ಚಲಿಸುವುದೇ ದೊಡ್ಡ ಸವಾಲಾಗಿದ್ದು, ಇಲ್ಲಿ ಚಿರತೆ ಕಂಡಿರುವುದು ವಾಹನ ಸವಾರರು ವಾಹನ ಚಲಾಯಿಸಲು ಭಯಪಡುವ ಪರಿಸ್ಥಿತಿ ಎದುರಾಗಿದೆ. ಅರಣ್ಯ ಇಲಾಖೆ ಚಿರತೆಯನ್ನು ಹಿಡಿದು ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.