
ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ ಮತ್ತು ಉಳ್ಳಾಲ ತಾಲ್ಲೂಕು ಅಮೆಚೂರ್ ಕಬಡ್ಡಿ ಸಂಸ್ಥೆಗಳ ಸಹಯೋಗದಲ್ಲಿ ಫ್ರೆಂಡ್ಸ್ ಉಳ್ಳಾಲ ಆಯೋಜಿಸಿರುವ ಆಯ್ದ ತಂಡಗಳ ಜೂನಿಯರ್ ಪ್ರೊ ಕಬಡ್ಡಿ ಲೀಗ್‌ನ ನಾಲ್ಕನೇ ಆವೃತ್ತಿ ಭಾನುವಾರ (ಡಿ.17) ಉಳ್ಳಾಲ ನಗರಸಭೆಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ನಡೆಯಲಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಫ್ರೆಂಡ್ಸ್ ಉಳ್ಳಾಲದ ಮುಖ್ಯಸ್ಥ ಆಕಾಶ್ ಶೆಟ್ಟಿ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಆಯ್ದ ಎಂಟು ತಂಡಗಳು ಲೀಗ್‌ನಲ್ಲಿ ಭಾಗವಹಿಸಲಿದ್ದಾರೆ ಎಂದರು.
ಟೂರ್ನಿಯನ್ನು ಶ್ರೀ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕ ಮಂಜಪ್ಪ ಕಾರ್ನವರ್, ಶ್ರೀ ವೈದ್ಯನಾಥ ಕ್ಷೇತ್ರ ಉಳ್ಳಾಲಬೈಲ್‍ನ ದಾಮೋದರ ಪೂಜಾರಿ ಹಾಗೂ ಬಂಡಿಕೊಟ್ಯ ಮಲರಾಯ ದೈವಸ್ಥಾನದ ಲತೀಶ್ ಪೂಜಾರಿ ಚಾಲನೆ ನೀಡಲಿದ್ದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರರು ಭಾಗವಹಿಸುವರು ಎಂದು ಅವರು ವಿವರಿಸಿದರು.
ಪಮ್ಮಿ ಕೊಡಿಯಾಲ್‌ಬೈಲ್, ರಕ್ಷಿತ್ ಉಳ್ಳಾಲ್ ಹಾಗೂ ಸೊನಿತ್ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.