ಕಡಬ (ಉಪ್ಪಿನಂಗಡಿ): ಕಡಬದ ನೂತನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸುವ ಸಂಬಂಧ ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ಪಾಟೀಲ್ ಭೇಟಿ ನೀಡಿ ಕಟ್ಟಡ ಪರಿಶೀಲಿಸಿದರು.
ಮಾಧ್ಯಮದವರೊಂದಿಗೆ ಮಾತಾಡಿದ ಅವರು, ‘ನ್ಯಾಯಾಲಯಕ್ಕಾಗಿ ಕಡಬ ಮಿನಿ ವಿಧಾನ ಸೌಧದ ಹಿಂಭಾಗದ 3 ಎಕರೆಯಲ್ಲಿ ಕಟ್ಟಡ ನಿರ್ಮಾಣವಾಗುವ ವರೆಗೆ ತಾತ್ಕಾಲಿಕವಾಗಿ ನ್ಯಾಯಾಲಯ ಪ್ರಾರಂಭಿಸಬೇಕಾಗಿದೆ. ಈ ಸಂಬಂಧ ಇಲ್ಲಿನ ಎಪಿಎಂಸಿ ಕಟ್ಟಡ ಪರಿಶೀಲಿಸಲಾಗಿದ್ದು, ಅದು ಅಷ್ಟೊಂದು ಸೂಕ್ತವಾಗಲ್ಲ. ಖಾಸಗಿ ಕಟ್ಟಡವನ್ನು ಪರಿಶೀಲಿಸಲಾಗಿದೆ. ಕಾದಿರಿಸಿದ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡಿ ನ್ಯಾಯಾಲಯ ಪ್ರಾರಂಭಿಸಲು ಸಮಯ ಬೇಕಾಗುವುದರಿಂದ ಈಗ ಪರಿಶೀಲಿಸಿದ ಖಾಸಗಿ ಕಟ್ಟಡದ ಸಾಧಕ–ಬಾಧಕ ತಿಳಿದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಶೀಘ್ರದಲ್ಲೇ ನ್ಯಾಯಾಲಯ ಪ್ರಾರಂಭಿಸಲಾಗುವುದು’ ಎಂದರು.
ಲೋಕೋಪಯೋಗಿ ಇಲಾಖೆ ಎಂಜಿನನಿಯರ್ ಪ್ರಮೋದ್ ಕುಮಾರ್ ಮಾಹಿತಿ ನೀಡಿದರು.
ವಕೀಲರಾದ ಶೀನಪ್ಪ ಗೌಡ ಬೈತಡ್ಕ, ಲೋಕೇಶ್ ಎಂ.ಜೆ., ಶಿವಪ್ರಸಾದ್ ಪುತ್ತಿಲ, ಕೃಷ್ಣಪ್ಪ ಗೌಡ ಕಕ್ವೆ, ನಾರಾಯಣ ಗೌಡ, ಮನೋಹರ ಸಬಳೂರು, ಸುಂದರ ಗೌಡ ಆಲಂಕಾರು, ಅವಿನಾಶ್ ಬೈತಡ್ಕ, ಪ್ರಶಾಂತ್ ಪಂಜೋಡಿ, ಅಶ್ವಿತ್ ಕಂಡಿಗ, ಜ್ಞಾನೇಶ್ ಕಡಬ, ಅಕ್ಷಯ್ ಕಡಬ, ಗುರುಚರಣ್ ಕೊಪ್ಪಡ್ಕ, ಚೇತನ್ ಕೊಂಬಾರು, ಜಿಲ್ಲಾ ನ್ಯಾಯಾಲಯದ ಮ್ಯಾನೇಜರ್ ಸುಭಾಶ್, ಕಟ್ಟಡದ ಮಾಲೀಕ ಸುಂದರ ಗೌಡ ಮಂಡೆಕರ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.