ಸುರತ್ಕಲ್: ರಾಷ್ಟ್ರಭಕ್ತ ನಾಗರಿಕ ವೇದಿಕೆ ವತಿಯಿಂದ ಕಾರ್ಗಿಲ್ ವಿಜಯೋತ್ಸವ, ಹಣತೆ ಮೆರವಣಿಗೆ ಮತ್ತು ಅರ್ಹ ಸೈನಿಕ ಕುಟುಂಬಗಳಿಗೆ ಸೈನಿಕ ಕಲ್ಯಾಣ ನಿಧಿ ವಿತರಣೆ ಕಾರ್ಯಕ್ರಮ ಇಲ್ಲಿ ನಡೆಯಿತು.
ಸುರತ್ಕಲ್ ರಾಷ್ಟ್ರ ಭಕ್ತ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿದರು.
ನಿವೃತ್ತ ಯೋಧರಾದ ಕರ್ನಲ್ ರಾಜೇಶ್ ಹೊಳ್ಳ, ಸಿಪಿಒ ಪ್ರಭಾಕರ ರೈ, ಸಾರ್ಜೆಂಟ್ ಗುಂಡೇರ ಅವರನ್ನು ಗೌರವಿಸಲಾಯಿತು.
ಸೈನಿಕ ಕಲ್ಯಾಣ ನಿಧಿಗೆ ವೇದಿಕೆ ವತಿಯಿಂದ ₹ 5 ಲಕ್ಷ ಹಸ್ತಾಂತರಿಸಲಾಯಿತು.
ಬಿಎಎಸ್‌ಎಲ್ ಸಂತೋಷ್ ಪೈ, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಸಾರ್ಜೆಂಟ್ ಸದಾಶಿವ ಮುಂಚೂರು ಭಾಗವಹಿಸಿದ್ದರು.
ಮಹೇಶ್ ಮೂರ್ತಿ ಸ್ವಾಗತಿಸಿದರು. ಉಪನ್ಯಾಸಕಿ ಗುಣವತಿ ರಮೇಶ್, ಶಶಿಕಲಾ ಶೆಟ್ಟಿ ನಿರೂಪಿಸಿದರು. ಬಹುಮಾನಿತರ ಪಟ್ಟಿಯನ್ನು ಯಶಪಾಲ್ ಸಾಲ್ಯಾನ್ ವಾಚಿಸಿದರು. ಅಣ್ಣಪ್ಪ ದೇವಾಡಿಗ ವಂದಿಸಿದರು.
ಸುಮಾರು 20 ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿ ಕ್ಯಾ.ಪ್ರಾಂಜಲ್ ಸರ್ಕಲ್ ಮಾಡುವ ಕುರಿತು ಬೆಂಬಲ ವ್ಯಕ್ತ ಪಡಿಸಿ ಹಕ್ಕೊತ್ತಾಯ ಮಂಡಿಸಿದರು.
ವೇದಿಕೆಯ ವತಿಯಿಂದ ಯೋಧರ ಸ್ಮರಣಾರ್ಥವಾಗಿ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಿಂದ ಆಯೋಜಿಸಲಾದ ಹಣತೆ ಮೆರವಣಿಗೆಯನ್ನು ರಮಾನಂದ ಭಟ್ ಉದ್ಘಾಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.