ADVERTISEMENT

ಕೆ.ಪಿ. ರಾವ್‌, ಕುಂಡಂತಾಯರಿಗೆ ‘ಕಾಂತಾವರ ಕನ್ನಡ ಸಂಘ ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 18:57 IST
Last Updated 9 ಅಕ್ಟೋಬರ್ 2020, 18:57 IST
ಕೆ.ಪಿ. ರಾವ್‌
ಕೆ.ಪಿ. ರಾವ್‌   

ಮಂಗಳೂರು: ಮೂಡುಬಿದಿರೆಯ ಕಾಂತಾವರ ಕನ್ನಡ ಸಂಘ ಕೊಡಮಾಡುವ 2020 ನೇ ಸಾಲಿನ ಎರಡು ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

‘ಕೆ.ಬಿ. ಜಿನರಾಜ ಹೆಗ್ಡೆ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿ’ಯನ್ನು ಭಾಷಾ ಗಣಕ ಪಿತಾಮಹ ಕೆ.ಪಿ ರಾವ್‌ ಅವರಿಗೆ ಮತ್ತು ಡಾ.ಯು.ಪಿ. ಉಪಾಧ್ಯಾಯರ ಹೆಸರಿನಲ್ಲಿರುವ ‘ಮಹೋಪಾಧ್ಯಾಯ ಪ್ರಶಸ್ತಿ’ಯನ್ನು ಜಾನಪದ ವಿದ್ವಾಂಸ ಡಾ.ಕೆ.ಎಲ್. ಕುಂಡಂತಾಯ ಅವರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು ತಲಾ ₹10 ಸಾವಿರ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದೆ.

ಡಿಸೆಂಬರ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.