ADVERTISEMENT

ತುಳು ಅಕಾಡೆಮಿಯ ಗೌರವ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರಕಟ

​ಪ್ರಜಾವಾಣಿ ವಾರ್ತೆ
Published 21 ಜುಲೈ 2022, 11:20 IST
Last Updated 21 ಜುಲೈ 2022, 11:20 IST
ಉಲ್ಲಾಸ ಕೃಷ್ಣ, ಕೃಷ್ಣಪ್ಪ ಉಪ್ಪೂರು, ಸಂಜೀವ ಬಂಗೇರ
ಉಲ್ಲಾಸ ಕೃಷ್ಣ, ಕೃಷ್ಣಪ್ಪ ಉಪ್ಪೂರು, ಸಂಜೀವ ಬಂಗೇರ   

ಮಂಗಳೂರು: ತಲಪಾಡಿಯ ಸಂಜೀವ ಬಂಗೇರ, ಪುತ್ತೂರಿನ ಉಲ್ಲಾಸ ಕೃಷ್ಣ ಪೈ ಮತ್ತು ಕೃಷ್ಣಪ್ಪ ಉಪ್ಪೂರು ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪುಸ್ತಕ ಬಹುಮಾನಕ್ಕೆ ಬೈಕಂಪಾಡಿಯ ಯೋಗೀಶ್ ಕಾಂಚನ್ ಅವರ 'ತಞನ ಬೊಳ್ಳಿ' ಕವನ ಸಂಕಲನ, ಕಾಸರಗೋಡಿನ ಅಕ್ಷತಾ ರಾಜ್ ಪೆರ್ಲ ಅವರ 'ಬೇಲಿ, ಸಾಪೊದ ಕಣ್ಣ್' ನಾಟಕ ಮತ್ತು ಡಾ.ಅಶೋಕ ಆಳ್ವ ಸುರತ್ಕಲ್ ಅವರ 'ತುಳುನಾಡಿನ ಪ್ರಾಣಿ ಜಾನಪದ' ಅಧ್ಯಯನ ಕೃತಿ ಆಯ್ಕೆ ಆಗಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಜಿ.ಕತ್ತಲ್ ಸಾರ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

'ಗೌರವ ಪ್ರಶಸ್ತಿ ₹50 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿದ್ದು ಪುಸ್ತಕ ಬಹುಮಾನ ₹25 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹೊಂದಿರುತ್ತದೆ' ಎಂದು ಅವರು ವಿವರಿಸಿದರು.

ADVERTISEMENT

'ಬಾಲ ಪ್ರತಿಭಾ ಪುರಸ್ಕಾರಕ್ಕೆ ಕೋಡಿಕೆರೆಯ ನಿರೀಕ್ಷಾ ಕೋಟ್ಯಾನ್, ಮುಂಬೈಯ ಜೀವಿಕಾ ಶೆಟ್ಟಿ, ಅಮೆರಿಕದ ಸಾನ್ವಿ, ಯುವ ಸಾಧಕ‌ ಪುರಸ್ಕಾರಕ್ಕೆ ನಂದಳಿಕೆಯ ಹರಿಪ್ರಸಾದ್, ಮುಂಬೈಯ ಚಿನ್ಮಯಿ‌ ಮೋಹನ್ ಸಾಲಿಯಾನ್, ಒಮಾನ್ ನ ರಮಾನಂದ ಶೆಟ್ಟಿ, ಮಾಧ್ಯಮ ಪುರಸ್ಕಾರಕ್ಕೆ ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಶಶಿ ಬಂಡಿಮಾರ್, ಮುಂಬೈಯ ರೋನ್ಸ್ ಬಂಟ್ವಾಳ್, ಸಂಘಟನಾ ಪುರಸ್ಕಾರಕ್ಕೆ ಜೈ ತುಳುನಾಡು, ಮುಂಬೈಯ ತುಳುಕೂಟ ಫೌಂಡೇಷನ್, ತುಳು ಕೂಟ ಕತಾರ್ ಆಯ್ಕೆಯಾಗಿವೆ. ಈ ಪುರಸ್ಕಾರ ₹10 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಒಳಗೊಂಡಿರುತ್ತದೆ' ಎಂದು ಅಧ್ಯಕ್ಷರು ತಿಳಿಸಿದರು.

ಆಗಸ್ಟ್ 21ರಂದು ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ‌ ಮಾಡಲಾಗುವುದು ಎಂದ ಅವರು ತುಳು ಸಂಶೋಧನೆಗೆ ಫೆಲೊಷಿಪ್ ನೀಡಲು ಅನುದಾನದ ಕೊರತೆ ಇದೆ. ಅದನ್ನು ನೀಗಿಸುವ ಬೇಡಿಕೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸಿನಿಮಾ ಮಂದಿರ ಒಳಗೊಂಡ ತುಳುಭವನ ಮತ್ತು ಬಯಲು ರಂಗಮಂದಿರ ನಿರ್ಮಾಣದ ಕಾರ್ಯ ಪ್ರಗತಿಯಲ್ಲಿದೆ ಎಂದರು.‌

ಅಕಾಡೆಮಿ ರಿಜಿಸ್ಟ್ರಾರ್ ಕವಿತಾ, ಸದಸ್ಯರಾದ ಲೀಲಾಕ್ಷ ಕರ್ಕೇರ, ಕಾಂತಿ ಶೆಟ್ಟಿ ಮತ್ತು ನಾಗೇಶ್ ಕುಲಾಲ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.