ADVERTISEMENT

ವ್ಯಾಪಾರಿಯಿಂದ ಹಣ ಕಬಳಿಸಿದ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 12:55 IST
Last Updated 13 ಸೆಪ್ಟೆಂಬರ್ 2019, 12:55 IST

ಕಾಸರಗೋಡು: ಪೋಕ್ಸೊ ಕಾನೂನಿನಲ್ಲಿ ಸಿಲುಕಿಸುವುದಾಗಿ ಬ್ಲಾಕ್ ಮೇಲ್ ಮಾಡಿ ನಗರದ ವ್ಯಾಪಾರಿಯನ್ನು ₹50ಸಾವಿರ ಲಪಟಾಯಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಅಣಂಗೂರು ನಿವಾಸಿ ಸಾಬಿತ್ (32), ಕೊಲ್ಲಂಪಾಡಿಯ ಮೊಹಮ್ಮದ್ ರಿಯಾಜ್ (30),
ಅಣಂಗೂರು ಟಿಪ್ಪು ನಗರದ ಮುಹಮ್ಮದ್ ಅಶ್ರಫ್ (24), ಪುಳ್ಕೂರು ನಿವಾಸಿ ಹಬೀಬ್ (25) ಎಂಬವರು
ಬಂಧಿತರು. ಈ ತಂದ ಸಂಚರಿಸುತ್ತಿದ್ದ ಮಾರುತಿ ಕಾರು, ಕಾರಿನಲ್ಲಿದ್ದ ಚೂರಿ , ಎ ಟಿ ಎಂ ಕಾರ್ಡು ಹಾಗೂ
₹ 15 ಸಾವಿರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ನಗರದ ಹೊಸ ಬಸ್‌ ನಿಲ್ದಾಣದಲ್ಲಿರುವ ಬಟ್ಟೆ ಅಂಗಡಿಯ ಮಾಲೀಕನ ಬಳಿಗೆ ಬಾಲಕನನ್ನು
ಈ ತಂಡ ಕಳಿಸಿತ್ತು. ಗೆಳೆತನ ಬೆಳೆಸಿದ ಬಾಲಕ ತನ್ನ ಫೋನ್ ನಂಬ್ರವನ್ನು ನೀಡಿದ್ದ. ಸಂಭಾಷಣೆ ರೆಕಾರ್ಡ್ ಮಾಡಿರುವುದಾಗಿ ತಂಡವು ಅಂಗಡಿ ಮಾಲೀಕನನ್ನು ಬ್ಲಾಕ್ ಮೇಲ್ ಮಾಡತೊಡಗಿತ್ತು. ಪೋಕ್ಸೋ ಪ್ರಕಾರ ಪ್ರಕರಣ ದಾಖಲಿಸುವ ಬೆದರಿಸಿ, ಎರಡು ಬಾರಿ ತಲಾ ₹25 ಸಾವಿರ ವಸೂಲಿಮಾಡಿದ್ದರು. ಕೊನೆಗೆ ಪೊಲೀಸರ ನೆರವು ಪಡೆದಿದ್ದರು ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿಯ ಬಂಧನ

ಮೊಬೈಲ್ ಫೋನ್ ಅಂಗಡಿಗೆ ನುಗ್ಗಿ ₹1.80 ಲಕ್ಷ ಮೌಲ್ಯದ ಫೋನ್ ಕದ್ದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ. ಕಡಂಬಾರು ಮಸೀದಿಯ ಬಳಿಯಲ್ಲಿ ವಾಸವಾಗಿರುವ ಪಾಲ್ಘಾಟು ನಿವಾಸಿ ಮುಹಮ್ಮದ್ ಮುಸ್ತಾಫಾ (32) ಬಂಧಿತ ಆರೋಪಿ. ಹೊಸಂಗಡಿಯ ಮುತ್ತಲೀಬ್ ಎಂಬವರ ಅಂಗಡಿಯಿಂದ ಇತ್ತೀಚೆಗೆ ರಾತ್ರಿ ಹೊತ್ತು ಅಂಗಡಿಗೆ ನುಗ್ಗಿದ ಆರೋಪಿ ಫೋನ್ ಕದ್ದೊಯ್ದಿದ್ದ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗದೆ ಇರಲು ಮುಖವಾದ ಧರಿಸಿ ಕಳ್ಳತನ ಮಾಡಿದ್ದ. ಎರಡು ದಿನಗಳ ಹಿಂದೆ ತಾನು ಕದ್ದ ಒಂದು ಫೋನನ್ನುಗೆಳೆಯನಿಗೆ ನೀಡಿದ್ದ. ಆತ ಅದರಲ್ಲಿ ಸಿಂ ಹಾಕಿರುವುದು ಪೊಲೀಸ್ ಸೈಬರ್ ಸೆಲ್ನಲ್ಲಿ ಪತ್ತೆಯಾಗಿತ್ತು.ಆರೋಪಿಯನ್ನು ಪತ್ತೆ ಮಾಡಿದ ಪೊಲೀಸರು ಕದ್ದ ಕೆಲವು ಫೋನ್‌ಗಳನ್ನು ಆತನ ಮನೆಯಿಂದ ವಶಪಡಿಸಿದ್ದಾರೆ.

ಮಳ್ಳಂಗೈ: ಅಂಗಡಿಯಲ್ಲಿ ಕಳವು

ಉಪ್ಪಳ ಬಳಿಯ ಮಳ್ಳಂಗೈ ಎಂಬಲ್ಲಿ 4 ಅಂಗಡಿಗಳಿಗೆ ಬುಧವಾರ ರಾತ್ರಿ ಕಳ್ಳರು ಕನ್ನ ಹಾಕಿದ್ದಾರೆ.

₹13 ಸಾವಿರ ಹಾಗೂ ಸಿಸಿಟಿವಿ ಯ ಹಾರ್ಡ್ ಡಿಸ್ಕನ್ನೂ ಕದ್ದು ಒಯ್ದಿದ್ದಾರೆ. ಚೇರೂರು ಅಬ್ದುಲ್ ಹಮೀದ್
ಎಂಬವರ ಮಾಲೀಕತ್ವದಲ್ಲಿ ಇರುವ ಕಟ್ಟಡ ಇದಾಗಿದೆ. ಕಳ್ಳನ ಫೋನ್ ಸ್ಥಳದಿಂದ ಪತ್ತೆಯಾಗಿದೆ.
ಕುಂಬಳೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.