ADVERTISEMENT

ಕಾಸರಗೋಡು: ₹ 2.87 ಕೋಟಿ ನಗದು ವಶ

ಹವಾಲಾ ವಹಿವಾಟು ಶಂಕೆ– ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 17:11 IST
Last Updated 14 ಜುಲೈ 2020, 17:11 IST

ಮಂಗಳೂರು: ಮಂಗಳೂರಿನಿಂದ ಕೇರಳಕ್ಕೆ ಯಾವುದೇ ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹ 2.87 ಕೋಟಿ ನಗದನ್ನು ಸೋಮವಾರ ವಶಪಡಿಸಿಕೊಂಡಿರುವ ಕೇರಳ ಅಬಕಾರಿ ಮತ್ತು ಪೊಲೀಸ್‌ ಅಧಿಕಾರಿಗಳು, ಮಂಗಳೂರಿನ ದೇರಳಕಟ್ಟೆ ನಿವಾಸಿಯಾಗಿರುವ ಕಾರು ಚಾಲಕನನ್ನು ಬಂಧಿಸಿದ್ದಾರೆ.

ದೇರಳಕಟ್ಟೆ ನಿವಾಸಿ ಶಂಶುದ್ದೀನ್‌ (33) ಬಂಧಿತ ಚಾಲಕ. ಈತ ಸೋಮವಾರ ಸಂಜೆ ಸ್ವಿಫ್ಟ್‌ ಕಾರನ್ನು ಅತಿವೇಗದಲ್ಲಿ ಚಲಾಯಿಸಿಕೊಂಡು ಕುಂಬಳೆ ಚೆಕ್‌ಪೋಸ್ಟ್‌ ದಾಟಿಹೋಗಲು ಯತ್ನಿಸಿದ್ದ. ಆಗ ಕುಂಬಳೆ ವಲಯದ ಅಬಕಾರಿ ಇನ್‌ಸ್ಪೆಕ್ಟರ್ ನೌಫಾಲ್‌ ನೇತೃತ್ವದ ತಂಡ ಕಾರನ್ನು ತಡೆದು ತಪಾಸಣೆ ನಡೆಸಿತ್ತು. ಕಾರಿನಲ್ಲಿ ₹ 2.87 ಕೋಟಿ ನಗದು ಮತ್ತು 160 ಗ್ರಾಂ. ಚಿನ್ನ ಪತ್ತೆಯಾಗಿತ್ತು.

ಕಾರಿನಲ್ಲಿ ಇರುವುದು ಚಿನ್ನಾಭರಣ ವಹಿವಾಟಿಗೆ ಸಂಬಂಧಿಸಿದ ಹಣ ಎಂದು ಚಾಲಕ ಹೇಳಿಕೆ ನೀಡಿದ್ದಾನೆ. ಆದರೆ, ನಗದಿಗೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಆರೋಪಿಯನ್ನು ವಶಕ್ಕೆ ಅಬಕಾರಿ ಅಧಿಕಾರಿಗಳು, ನಗದು ಮತ್ತು ಚಿನ್ನವನ್ನು ವಶಪಡಿಸಿಕೊಂಡಿದ್ದರು. ಮಂಗಳವಾರ ಆತನನ್ನು ಕಾಸರಗೋಡು ಪೊಲೀಸರ ವಶಕ್ಕೆ ಹಸ್ತಾಂತರಿಸಿದ್ದರು. ಆತನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ವಿಚಾರಣೆಗಾಗಿ ಪೊಲೀಸರ ವಶಕ್ಕೆ ನೀಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.