ADVERTISEMENT

ಕಾಸರಗೋಡು: ಕನ್ನಡಿಗರ ಸಮಸ್ಯೆ:ಜಿ.ಪಂ. ಸದಸ್ಯರಿಂದ ಸಚಿವರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 11:54 IST
Last Updated 2 ನವೆಂಬರ್ 2019, 11:54 IST
ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಕನ್ನಡ ತಿಳಿಯದ ಶಿಕ್ಷಕರ ನೇಮಕಾತಿ ನಡೆಸಿರುವ ಕ್ರಮವನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಆಡಳಿತ ಸಮಿತಿ ನಿಯೋಗ ಶನಿವಾರ ಜಿಲ್ಲೆಗೆ ಭೇಟಿ ನೀಡಿದ್ದ ಕೇರಳದ ಶಿಕ್ಷಣ ಸಚಿವ ಶಿಕ್ಷಣ ಸಚಿವ ಸಿ. ರವೀಂದ್ರನಾಥ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು

ಕಾಸರಗೋಡು: ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಗೊತ್ತಿಲ್ಲದ ಮಲಯಾಳಿ ಶಿಕ್ಷಕರ ನೇಮಕಾತಿ ರದ್ದುಗೊಳಿಸಬೇಕೆಂದುಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ. ಜಿ. ಸಿ .ಬಷೀರ್ ಅವರ ನೇತೃತ್ವದಲ್ಲಿ ಇಲ್ಲಿಗೆ ಶನಿವಾರ
ಭೇಟಿ ನೀಡಿದ್ದ ಶಿಕ್ಷಣ ಸಚಿವ ಸಿ. ರವೀಂದ್ರನಾಥ್‌ ಅವರಿಗೆ ಮನವಿ ಸಲ್ಲಿಸಲಾಯಿತು.

‘ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಮಲಯಾಳ ಬಾರದ ಅಭ್ಯರ್ಥಿಗಳ ರ‍್ಯಾಂಕ್
ಪಟ್ಟಿಯನ್ನು ತಕ್ಷಣವೇ ರದ್ದು ಗೊಳಿಸಬೇಕು, ಕನ್ನಡ ಮಾಧ್ಯಮ ಸೆಕೆಂಡರಿ ಪರೀಕ್ಷೆಯನ್ನು ಮಲಯಾಳಂ
ಭಾಷೆಯಲ್ಲಿ ನಡೆಸಲು ಕುತಂತ್ರ ನಡೆಸಲಾಗುತ್ತಿದ್ದು, ಈ ಪರೀಕ್ಷೆಯನ್ನು ಕನ್ನಡದಲ್ಲೇ ನಡೆಸಬೇಕು’ ಮುಂತಾದ ಬೇಡಿಕೆಗಳನ್ನು ಒಳಗೊಂಡ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಶಾದ್ ವರ್ಕಾಡಿ , ಶಾನವಾಸ್
ಹಾಗೂ ಸದಸ್ಯ ಕೆ. ಶ್ರೀಕಾಂತ್ ಇದ್ದರು.

ADVERTISEMENT

ಕನ್ನಡ ಮಾಧ್ಯಮ ಶಾಲೆಯಾದ ವರ್ಕಾಡಿಯ ಮೂಡಂಬೈಲ್ ಸರ್ಕಾರಿ ಕನ್ನಡ ಮಕ್ಕಳಿಗೆ ಪಾಠ ಕಲಿಸಲು ಮಲಯಾಳಿ ಶಿಕ್ಷಕರ ನೇಮಕಾತಿ ನಡೆಸಿದ ಬಗ್ಗೆ ಇರುವ ಹೋರಾಟ ಮುಂದುವರಿಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.