ADVERTISEMENT

ಮಂಗಳೂರು: ಗೃಹ, ಕಾರು, ಚಿನ್ನಾಭರಣ ಸಾಲ ಸೌಲಭ್ಯ

ಕರ್ಣಾಟಕ ಬ್ಯಾಂಕಿನಿಂದ ‘ಕೆಬಿಎಲ್ ಉತ್ಸವ’ ಸಾಲ ಮೇಳ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 7:52 IST
Last Updated 9 ಅಕ್ಟೋಬರ್ 2021, 7:52 IST
ಕರ್ಣಾಟಕ ಬ್ಯಾಂಕಿನ ಕೆಬಿಎಲ್‌ ಉತ್ಸವಕ್ಕೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ಚಾಲನೆ ನೀಡಿದರು.
ಕರ್ಣಾಟಕ ಬ್ಯಾಂಕಿನ ಕೆಬಿಎಲ್‌ ಉತ್ಸವಕ್ಕೆ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌. ಚಾಲನೆ ನೀಡಿದರು.   

ಮಂಗಳೂರು: ಕರ್ಣಾಟಕ ಬ್ಯಾಂಕ್ ನಗರದ ಪ್ರಧಾನ ಕಚೇರಿಯಲ್ಲಿ ‘ಕೆಬಿಎಲ್ ಉತ್ಸವ 2021-22’ ಕ್ಕೆ ಚಾಲನೆ ನೀಡಿದ್ದು, ಅ.7 ರಿಂದ ಅ. 31ರವರೆಗೆ ಗೃಹ ಸಾಲ, ಕಾರು ಸಾಲ ಹಾಗೂ ಚಿನ್ನಾಭರಣಗಳ ಮೇಲೆ ಸಾಲ ಮೇಳ ನಡೆಯಲಿದೆ. ಗ್ರಾಹಕರು ದೇಶದಾದ್ಯಂತ ವ್ಯಾಪಿಸಿರುವ ಬ್ಯಾಂಕಿನ ಎಲ್ಲ ಶಾಖೆಗಳಲ್ಲಿಯೂ ಇದರ ಪ್ರಯೋಜನವನ್ನು ಪಡೆಯಬಹುದು.

‘ಕೆಬಿಎಲ್ ಉತ್ಸವ’ ಅಡಿಯಲ್ಲಿ ಗೃಹ ಸಾಲ, ಕಾರು ಸಾಲ ಹಾಗೂ ಚಿನ್ನಾಭರಣಗಳ ಮೇಲೆ ಸಾಲ ಇತ್ಯಾದಿ ಹಲವಾರು ಅನುಕೂಲತೆಗಳು ಗ್ರಾಹಕರಿಗೆ ಒದಗಲಿವೆ. ಈ ಸಂದರ್ಭದಲ್ಲಿ ಸಾಲಗಳು ನಿರ್ವಹಣಾ ಶುಲ್ಕಗಳಲ್ಲಿ ರಿಯಾಯಿತಿ ಹಾಗೂ ಆಕರ್ಷಕ ಬಡ್ಡಿದರಗಳಲ್ಲದೇ ಹಲವಾರು ಇತರ ಸೌಲಭ್ಯಗಳೊಂದಿಗೆ ಅರ್ಹ ಗ್ರಾಹಕರಿಗೆ ಲಭ್ಯವಾಗಲಿವೆ.

ಭವಿಷ್ಯದ ಡಿಜಿಟಲ್ ಬ್ಯಾಂಕ್ ಆಗಿ ಹೊರಹೊಮ್ಮುವತ್ತ ಹೆಜ್ಜೆ ಇಡುತ್ತಿರುವ ಕರ್ಣಾಟಕ ಬ್ಯಾಂಕ್, ಡಿಜಿಟಲ್ ವ್ಯವಸ್ಥೆಯ ಮೂಲಕ ಸಾಲ ವಿತರಣಾ ಕಾರ್ಯದಲ್ಲಿ ತೊಡಗಿದೆ. ಇದರಿಂದ ಗ್ರಾಹಕರಿಗೆ ಕ್ಷಿಪ್ರವಾಗಿ, ಸುಲಭವಾಗಿ ಸಾಲ ಸಿಗುವ ಮೂಲಕ ಅವರಿಗೆ ಉತ್ತಮ ಅನುಭೂತಿಯನ್ನು ನೀಡಲಿದೆ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

‘ಕೆಬಿಎಲ್ ಉತ್ಸವ 2021-22’ ಎನ್ನುವ ಸಂಭ್ರಮಾಚರಣೆಗೆ ಚಾಲನೆ ನೀಡಲು ಹರ್ಷ ಎನಿಸುತ್ತದೆ. ಹಬ್ಬದ ದಿನಗಳಲ್ಲಿ ನಮ್ಮ ಗ್ರಾಹಕರ ಸಂತೋಷವನ್ನು ಇದು ಮತ್ತಷ್ಟು ಹೆಚ್ಚಿಸಲಿದೆ. ಆಕರ್ಷಕ ಬಡ್ಡಿದರ, ತ್ವರಿತ ಮಂಜೂರಾತಿ, ಇತ್ಯಾದಿ ಸೌಲಭ್ಯಗಳು ಗ್ರಾಹಕರಿಗೆ ಅನುಕೂಲವಾಗಲಿವೆ. ಗ್ರಾಹಕರ ಕನಸಿನ ಮನೆ, ಕಾರು ಕೊಳ್ಳಲು ಕರ್ಣಾಟಕ ಬ್ಯಾಂಕ್ ಸದಾ ಅವರಿಗೆ ಅನುವು ಮಾಡಿಕೊಡುತ್ತದೆ’ ಎಂದು ಅವರು ಹೇಳಿದರು.

‘ಡಿಜಿಟಲ್ ಬ್ಯಾಂಕ್ ಆಗುವತ್ತ ಹೆಜ್ಜೆ ಇಡುತ್ತಿರುವ ನಾವು ಸಾಲ ವಿತರಣೆಯಲ್ಲೂ ಡಿಜಿಟಲ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಕ್ಷಿಪ್ರವಾಗಿ, ಸುಲಭವಾಗಿ ಗ್ರಾಹಕರಿಗೆ ಸಾಲ ವಿತರಿಸುತ್ತಿದ್ದೇವೆ. ನಮ್ಮ ಈ ಎಲ್ಲಾ ಉಪಕ್ರಮಗಳು ಗ್ರಾಹಕರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಲಿವೆ ಎನ್ನುವ ಭರವಸೆ ನನಗಿದೆ’ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಮಹಾಬಲೇಶ್ವರ ಎಂ.ಎಸ್. ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.