ADVERTISEMENT

ಕೊಂಕಣಿ ಮಾನ್ಯತಾ ದಿನ: ಕೊಂಕಣಿಗರಿಗೆ ಅಭಿಮಾನದ ದಿನ

ವೆಬಿನಾರ್‌ನಲ್ಲಿ ವಾಮನ್‌ ಶೆಣೈ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 7:06 IST
Last Updated 21 ಆಗಸ್ಟ್ 2020, 7:06 IST

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರದಲ್ಲಿ ಗುರುವಾರ ಕೊಂಕಣಿ ಮಾನ್ಯತಾ ದಿನವನ್ನು ವೆಬಿನಾರ್‌ ಮೂಲಕ ಆಚರಿಸಲಾಯಿತು.

ವಿಶ್ವ ಕೊಂಕಣಿ ಕೇಂದ್ರ ಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕೊಂಕಣಿ ಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಯಾದ ದಿನವನ್ನು ವಿಶ್ವದಾದ್ಯಂತ ಕೊಂಕಣಿಗರು ವಿಶೇಷ ಅಭಿಮಾನದಿಂದ ಆಚರಿಸುತ್ತಾರೆ’ ಎಂದು ಹೇಳಿದರು.

ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿ ಕಾರ್ಯದರ್ಶಿ ಪ್ರದೀಪ್ ಜಿ. ಪೈ ಸ್ವಾಗತಿಸಿದರು. ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಟಿ.ವಿ. ಮೋಹನದಾಸ ಪೈ, ಕೊಂಕಣಿ ಮಾತೃ ಭಾಷಾ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಉತ್ತರ ಅಮೇರಿಕಾ ‘ಖಬರ್’ ಕೊಂಕಣಿ ಮಾಸ ಪತ್ರಿಕೆಯ ಸಂಪಾದಕ ವಸಂತ ಭಟ್ ಅಭಿನಂದಿಸಿದರು.

ADVERTISEMENT

ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ಗಿಲ್ಬರ್ಟ್ ಡಿಸೋಜ, ಉತ್ತರ ಅಮೆರಿಕ ಕೊಂಕಣಿ ಸಂಘದ (ನಾಕಾ) ಅಧ್ಯಕ್ಷ ಕೆ. ರಮೇಶ್ ಕಾಮತ್, ಉತ್ತರ ಅಮೆರಿಕ ಕೊಂಕಣಿ ಸಮ್ಮೇಳನ– 2020 ಸಂಚಾಲಕ ರಾಮ್ ಆಚಾರ್ಯ, ಭಾಮೀ ವಸಂತ ಶೆಣೈ, ಪ್ರೇರಣಾ ಮಾರ್ಗದರ್ಶಿ ಸಂದೀಪ್ ಶೆಣೈ, ಕ್ಷಮತಾ ಸಂಚಾಲಕ ಗಿರಿಧರ್ ಕಾಮತ್, ಅಲ್ಯುಮ್ನಿ ಸಂಘದ ಅಧ್ಯಕ್ಷೆ ಸ್ನೇಹಾ ವಿ. ಶೆಣೈ, ಸಂಘದ ಪೂರ್ವಾಧ್ಯಕ್ಷ ದಿನೇಶ ಪೈ (ಕೆನಡಾ), ದುಬೈಯ ಉದ್ಯಮಿ ಗೋಕುಲನಾಥ ಪ್ರಭು, ಮುರಳೀಧರ್ ಪ್ರಭು (ಕುಮಟಾ) ಮತ್ತು ವಿಶ್ವದಾದ್ಯಂತದಿಂದ ನೂರಾರು ಕೊಂಕಣಿ ಭಾಷಿಕರು ಉತ್ಸುಕತೆಯಿಂದ ಭಾಗವಹಿಸಿದ್ದರು.

ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಜಿ. ನಂದಗೋಪಾಲ ಶೆಣೈ ವಂದಿಸಿದರು. ಅಲ್ಯುಮ್ನಿ ಡಾ.ವೈಷ್ಣವಿ ಕಿಣಿ (ಬೆಂಗಳೂರು) ಪ್ರಾರ್ಥನಾ ಗೀತೆ ಹಾಡಿದರು. ಅಲ್ಯುಮ್ನಿ ಅನಿರುದ್ಧ ಭಟ್ ಕೊಂಕಣಿ ಅಭಿಮಾನ ಗೀತೆ ಹಾಡಿದರು. ನಿರ್ದೇಶಕ ಗುರುದತ್ತ ಬಂಟ್ವಾಳಕರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.