ADVERTISEMENT

ಪುತ್ತೂರು: ಚಳವಳಿ ಕೈಬಿಟ್ಟ ಕೆಎಸ್‌ಆರ್‌ಟಿಸಿ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:53 IST
Last Updated 15 ಡಿಸೆಂಬರ್ 2021, 4:53 IST

ಪುತ್ತೂರು: ‘ಕೆಎಸ್‌ಆರ್‌ಟಿಸಿಯ ನಗದು ವ್ಯವಹಾರ ವಿಭಾಗದ ಸಿಬ್ಬಂದಿ ನಡೆಸಲು ಉದ್ದೇಶಿಸಿದ್ದ ‘ನಗದು ಪಾವತಿ ಕಡಿತ ಚಳವಳಿ’ಯನ್ನು ಸಂಸ್ಥೆಯು ಪೂರ್ಣವೇತನ ಪಾವತಿಸಿರುವ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ’ ಎಂದು ಪುತ್ತೂರು ವಿಭಾಗ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಗೌರವ ಅಧ್ಯಕ್ಷ ಗಿರೀಶ ಮಳಿ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಜ್ದೂರ್ ಸಂಘ ನೀಡಿದ ಚಳವಳಿ ಕರೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚೆತ್ತುಕೊಂಡು ವೇತನ ಪಾವತಿ ವ್ಯವಸ್ಥೆಯನ್ನು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಶಾಂತಾರಾಮ ವಿಟ್ಲ, ಬಿ. ರಾಮಕೃಷ್ಣ, ವೆಂಕಟರಮಣ ಭಟ್, ಸಂಜೀವ ಗೌಡ, ಸತ್ಯಶಂಕರ ಭಟ್, ಮಹಾಬಲ ಜಿ., ಕಾರ್ಯಕಾರಿ ಸಮಿತಿ ಸದಸ್ಯ ರಾಮಚಂದ್ರ ಅಡಪ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.