ADVERTISEMENT

ಕುಕ್ಕೆ: ಕೆಲಸಕ್ಕೆ ಮರು ನಿಯೋಜಿಸಲು ಒತ್ತಾಯಿಸಿ ಪ್ರತಿಭಟನೆ

ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2022, 13:29 IST
Last Updated 11 ಜೂನ್ 2022, 13:29 IST
ಕುಕ್ಕೆ ದೇಗುಲದ ಆಡಳಿತ ಕಚೇರಿ ಮೀಟಿಂಗ್ ಹಾಲ್ ಬಳಿ ಪಂಚಪರ್ವದ ಕೆಲಸಗಾರರು ಪ್ರತಿಭಟನೆ ನಡೆಸಿದರು.          
ಕುಕ್ಕೆ ದೇಗುಲದ ಆಡಳಿತ ಕಚೇರಿ ಮೀಟಿಂಗ್ ಹಾಲ್ ಬಳಿ ಪಂಚಪರ್ವದ ಕೆಲಸಗಾರರು ಪ್ರತಿಭಟನೆ ನಡೆಸಿದರು.             

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೆಲಸ ಕಳೆದುಕೊಂಡ 27 ಮಂದಿ ಶನಿವಾರ ಆಡಳಿತ ಕಚೇರಿಯ ಸಭಾಂಗಣದ ಬಳಿ ‍ಪ್ರತಿಭಟನೆ ನಡೆಸಿದರು.

3 ತಿಂಗಳ ಹಿಂದೆ ಕುಕ್ಕೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅವರು 27 ಮಂದಿ ಪಂಚಪರ್ವದ ಕೆಲಸಗಾರರನ್ನು ಕೆಲಸದಿಂದ ಬಿಡುಗಡೆಗೊಳಿಸಿದ್ದರು. ಈ ಬಗ್ಗೆ ಆಡಳಿತ ಮಂಡಳಿಯು ಕೆಲಸಗಾರರನ್ನು ಮತ್ತೆ ತೆಗೆದುಕೊಳ್ಳಬೇಕೆಂಬ ನಿರ್ಣಯ ಮಾಡಿದ್ದು, ಅದರಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿತ್ತು. ಇತ್ತೀಚೆಗೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಅವರು ಸಭೆಯಲ್ಲಿ ಪಂಚಪರ್ವದ ಕೆಲಸದವರನ್ನು ಮತ್ತೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು. ಇದಾಗಿ ಎರಡು ವಾರ ಕಳೆದರೂ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಯಾವುದೇ ಸೂಚನೆ ನೀಡದಿರುವ ಬಗ್ಗೆ ಪಂಚಪರ್ವದ ಕೆಲಸದವರು ಶನಿವಾರ ಬೆಳಿಗ್ಗಿನಿಂದ ಪ್ರತಿಭಟನೆ ಧರಣಿ ನಡೆಸಿದರು.

ಪ್ರತಿಭಟನಕಾರರ ಜತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಮಾತುಕತೆ ನಡೆಸಿ ಜೂನ್‌ 14ರಂದು ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಜೂನ್‌ 15ರೊಳಗೆ ಕೆಲಸದ ಆದೇಶ ನೀಡುವ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನನಿರತರು ಪ್ರತಿಭಟನೆ ಹಿಂತೆಗೆದುಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.