ADVERTISEMENT

ರಥಗಳಿಗೆ ಗೂಟ ಪೂಜಾ ಮುಹೂರ್ತ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 15:52 IST
Last Updated 19 ನವೆಂಬರ್ 2021, 15:52 IST
ರಥಗಳಿಗೆ ಗೂಟ ಪೂಜೆಯನ್ನು ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ನೆರವೇರಿಸಿದರು
ರಥಗಳಿಗೆ ಗೂಟ ಪೂಜೆಯನ್ನು ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ನೆರವೇರಿಸಿದರು   

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸಂದರ್ಭ ಎಳೆಯುವ ರಥಗಳಿಗೆ ಗೂಟ ಪೂಜಾ ಮುಹೂರ್ತ ಶುಕ್ರವಾರ ನಡೆಯಿತು.

ಜಾತ್ರಾ ಸಮಯದಲ್ಲಿ ಎಳೆಯುವ ಬ್ರಹ್ಮರಥ ಮತ್ತು ಪಂಚಮಿ ರಥಗಳನ್ನು ನಿರ್ಮಿಸಲು ಕಾರ್ತಿಕ ಹುಣ್ಣಿಮೆಯ ದಿನವಾದ ಶುಕ್ರವಾರ ಗೂಟ ಪೂಜಾ ಮುಹೂರ್ತವನ್ನು ವೈಧಿಕ ವಿಧಾನಗಳೊಂದಿಗೆ ಕ್ಷೇತ್ರ ಪುರೋಹಿತ ಮಧುಸೂದನ ಕಲ್ಲೂರಾಯ ನೆರವೇರಿಸಿದರು.

ಸಂಪ್ರದಾಯದಂತೆ ರಥ ಕಟ್ಟಲಿರುವ ಮಲೆಕುಡಿಯ ಸಮುದಾಯದ ಗುರಿಕಾ
ರರಿಗೆ ರಥ ಕಟ್ಟಲು ಪ್ರಸಾದ ರೂಪದಲ್ಲಿ ವೀಳ್ಯವನ್ನು ಅವರು ನೀಡಿದರು.

ADVERTISEMENT

ವೀಳ್ಯ ಸ್ವೀಕರಿಸಿದ ಮಲೆಕುಡಿಯ ಸಮುದಾಯದವರು ಬ್ರಹ್ಮರಥ ಮತ್ತು ಪಂಚಮಿ ರಥಕ್ಕೆ ಗೂಟ ನೆಡುವ ಕೈಂಕರ್ಯ ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಒ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯೆ ವನಜಾ.ವಿ.ಭಟ್, ಶೋಭಾ ಗಿರಿಧರ್, ಮನೋಜ್ ಸುಬ್ರಹ್ಮಣ್ಯ, ಮಲೆಕುಡಿಯ ಸಮುದಾಯದ ಗುರಿಕಾರ ಐತಪ್ಪ ಅರಿಗುಡಿ, ದಿನಕರ ಕುಲ್ಕುಂದ ಕಾಲನಿ, ಎ.ವಿ.ನಾಗೇಶ್, ಮೋಂಟ ಮಲೆ, ಅಂಗಾರ ಮಲೆ, ಕೆಂಚಪ್ಪ ಕಲ್ಲಜಡ್ಕ, ಸುಂದರ ಕಲ್ಲಜಡ್ಕ,ಭಾಸ್ಕರ ಅರ್ಗುಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.