ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಪ್ಪೆಪದವಿನಲ್ಲಿ ಹೊಸ ಉಪ ಅಂಚೆ ಕಚೇರಿ ಇದೇ 8ರಿಂದ ಕಾರ್ಯಾರಂಭ ಮಾಡಲಿದ್ದು, ಇನ್ನು ಈ ಗ್ರಾಮಕ್ಕೆ ಹೊಸ ಪಿನ್‌ಕೋಡ್ (574162) ಲಭ್ಯವಾಗಲಿದೆ ಎಂದು ಅಂಚೆ ಇಲಾಖೆ ತಿಳಿಸಿದೆ.
‘ಇರುವೈಲು ಮತ್ತು ಕೊಳವೂರು ಶಾಖಾ ಅಂಚೆ ಕಚೇರಿಗಳ ವ್ಯಾಪ್ತಿಗೆ ಒಳಪಡುವ ಎಲ್ಲ ಪ್ರದೇಶಗಳು ಮತ್ತು ಕುಪ್ಪೆಪದವು ಶಾಖಾ ಅಂಚೆ ಕಚೇರಿಗೆ ಒಳಪಡುವ ಎಲ್ಲ ಪ್ರದೇಶಗಳಿಗೆ ಇದೇ 8ರ ಬಳಿಕ 574162 ಬಳಸಬೇಕು. ಈ ಪ್ರದೇಶಗಳಿಗೆ ಇನ್ನು ಮುಂದೆ ಅಂಚೆ ಬಟವಾಡೆಯು ಕುಪ್ಪೆಪದವು ಉಪ ಅಂಚೆ ಕಚೇರಿಯಿಂದ ನಡೆಯಲಿದೆ. ಇವುಗಳ ವ್ಯಾಪ್ತಿಯ ಎಲ್ಲ ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು, ಸಹಕಾರಿ ಸಂಸ್ಥೆಗಳು, ಖಾಸಗಿ ಕಚೇರಿಗಳು, ಕಂಪನಿಗಳು ಇನ್ನು ಪತ್ರ ವ್ಯವಹಾರಗಳಿಗೆ ಕುಪ್ಪೆಪದವು ಅಂಚೆ ಕಚೇರಿಯ ನೂತನ ಪಿನ್‌ಕೋಡ್ ನಮೂದಿಸಬೇಕು’ ಎಂದು ಅಂಚೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಪ್ಪೆಪದವು, ಇರುವೈಲು, ಕೊಳವೂರು ಪ್ರದೇಶಗಳು ಇದುವರೆಗೆ ಗಂಜಿಮಠ ಅಂಚೆ ಕಚೇರಿಯ ಬಟವಾಡೆ ವ್ಯಾಪ್ತಿಗೆ ಒಳಪಟ್ಟಿದ್ದವು. ಈ ಗ್ರಾಮಗಳಿಗೆ 574144 ಪಿನ್ ಕೋಡ್ ಬಳಸಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.