ADVERTISEMENT

ಪಟ್ಟೋರಿ: 42ನೇ ವರ್ಷದ ಏಕಾಹ ಭಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 5:07 IST
Last Updated 29 ಜನವರಿ 2023, 5:07 IST
ಪಟ್ಟೋರಿ ನಾಗಬ್ರಹ್ಮ ಕ್ಷೇತ್ರದಲ್ಲಿ ಏಕಾಹ ಭಜನೆಯಲ್ಲಿ ಕೊಣಾಜೆ ಬೀಡು ಸತ್ಯನಾರಾಯಣ ಭಟ್ ದೀಪ ಪ್ರಜ್ವಲನೆ ಮಾಡಿದರು.
ಪಟ್ಟೋರಿ ನಾಗಬ್ರಹ್ಮ ಕ್ಷೇತ್ರದಲ್ಲಿ ಏಕಾಹ ಭಜನೆಯಲ್ಲಿ ಕೊಣಾಜೆ ಬೀಡು ಸತ್ಯನಾರಾಯಣ ಭಟ್ ದೀಪ ಪ್ರಜ್ವಲನೆ ಮಾಡಿದರು.   

ಮುಡಿಪು: ಕೊಣಾಜೆ ಗ್ರಾಮದ ಪಟ್ಟೋರಿಯ ನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ 42ನೇ ವರ್ಷದ ಏಕಾಹ ಭಜನೆ ಶನಿವಾರ ಆರಂಭಗೊಂಡಿತು.

ಕೊಣಾಜೆ ಬೀಡು ಸತ್ಯನಾರಾಯಣ ಭಟ್ ದೀಪ ಪ್ರಜ್ವಲನೆ ಮಾಡಿದರು. ಶ್ರೀನಿವಾಸ ಕಾಜವ ಪಟ್ಟೋರಿ, ದಿವಾಕರ ಭಂಡಾರಿ, ಕರುಣಾಕರ ಕಾನ, ಬಂಟು ಕೆ. ಕಾಟುಕೋಡಿ, ಬೂಬ ಪುಲ್ಲು, ರಾಮಕೃಷ್ಣ ಪಟ್ಟೋರಿ, ಭಜನಾ ಮಂಡಳಿ ಅಧ್ಯಕ್ಷ ರಾಧಾಕೃಷ್ಣ ಕಲಾಯಿ, ಪ್ರಧಾನ ಕಾರ್ಯದರ್ಶಿ ಯತೀಶ್ ಮದಕ ಹಾಗೂ ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಏಕಾಹ ಭಜನೆಯು ವಿವಿಧ ಭಜನಾ ಮಂಡಳಿಗಳ ಉಪಸ್ಥಿತಿಯೊಂದಿಗೆ ಭಾನುವಾರದವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT