ADVERTISEMENT

ಬೆಳ್ತಂಗಡಿ: ಬಾವಿಗೆ ಬಿದ್ದ ಚಿರತೆ ರಕ್ಷಣೆ

ಬೆಳ್ತಂಗಡಿ ತಾಲ್ಲೂಕಿನ ನಾವರ ಗ್ರಾಮ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 3:52 IST
Last Updated 3 ಜೂನ್ 2022, 3:52 IST
ಬಾವಿಗೆ ಬಿದ್ದ ಚಿರತೆಯನ್ನು ಬೋನಿನಲ್ಲಿ ಬಂಧಿಸಲಾಯಿತು.
ಬಾವಿಗೆ ಬಿದ್ದ ಚಿರತೆಯನ್ನು ಬೋನಿನಲ್ಲಿ ಬಂಧಿಸಲಾಯಿತು.   

ಬೆಳ್ತಂಗಡಿ: ತಾಲ್ಲೂಕಿನ ನಾವರ ಗ್ರಾಮದಲ್ಲಿ ಶುಕ್ರವಾರ ಬಾವಿಗೆ ಬಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ.

ನಾವರ ಗ್ರಾಮದ ಜಾಲ ಎಂಬಲ್ಲಿನ ವಸಂತ ಕೋಟ್ಯಾನ್ ಅವರ ಮನೆಯ ಬಾವಿಗೆ ತಡರಾತ್ರಿ ಚಿರತೆಯೊಂದು ಬಿದ್ದಿತ್ತು. ಮೇಲೆ ಬರಲು ಚಿರತೆ ಒದ್ದಾಡುತ್ತಿತ್ತು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ‌‌ ನೀಡಿದರು. ಕಾರ್ಕಳದಿಂದ 15 ಮಂದಿಯ ತಂಡವೊಂದು ಮಧ್ಯಾಹ್ನದ ವೇಳೆಗೆ ಬಂದು, ಚಿರತೆಯನ್ನು ಬಲೆಯ ಮೂಲಕ ಹಿಡಿದು ಬೋನಿಗೆ ಸೇರಿಸುವಲ್ಲಿ ಯಶಸ್ವಿಯಾದರು. ಈಚೆಗೆ ಚಿರತೆಗಳ ಹಾವಳಿ ನಾವರ, ಸುಲ್ಕೇರಿ ಗ್ರಾಮದ ಸುತ್ತಮುತ್ತ ಇದ್ದು, ಹಲವಾರು ಸಾಕುನಾಯಿಗಳು, ಕೋಳಿಗಳು ಕಣ್ಮರೆಯಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT