ADVERTISEMENT

ಬೆಳ್ತಂಗಡಿ: ಕವಿತೆ ಮಂತ್ರವಾಗಲಿ: ಪೆರ್ಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 5:59 IST
Last Updated 6 ಫೆಬ್ರುವರಿ 2023, 5:59 IST
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿದರು
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ವಸಂತ ಕುಮಾರ್ ಪೆರ್ಲ ಮಾತನಾಡಿದರು   

ಬೆಳ್ತಂಗಡಿ: ಕಾವ್ಯವು ಐಹಿಕ ವಿಚಾರಗಳಲ್ಲಿ ವ್ಯವಹರಿಸಿ ವೈಚಾರಿಕತೆಗೆ ಮಜಲು ನೀಡುತ್ತದೆ. ವಿಷಯದ ಅಡಕ, ಸಂಕ್ಷಿಪ್ತತೆ, ಸಮುಚ್ಚಿತ ಭಾಷೆಯ ಬಳಕೆಯ ಸ್ವರೂಪವೇ ಕವಿತೆ. ಕವಿತೆಗಳು ಅವರವರ ಭಾವಗಳನ್ನು, ಅನುಭವಗಳನ್ನು ಹೇಳಿಕೊಳ್ಳುವ ವಿಧಾನವೂ ಹೌದು. ಮಂತ್ರ ಬೇರೆ ಅಲ್ಲ ಕಾವ್ಯ ಬೇರೆ ಅಲ್ಲ. ನಮ್ಮ ಕವಿತೆಗಳು ಮಂತ್ರಗಳಾಗಬೇಕು ಎಂದು ಕವಿ, ಸಾಹಿತಿ ಡಾ.ವಸಂತ ಕುಮಾರ್ ಪೆರ್ಲ ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜರಗಿದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ಸುರೇಶ ನೆಗಳಗುಳಿ ಮಂಗಳೂರ, ಗುಣಾಜೆ ರಾಮಚಂದ್ರ ಭಟ್ ಉಳ್ಳಾಲ, ಅಚುಶ್ರೀ ಬಾಂಗೇರು ಬೆಳ್ತಂಗಡಿ, ಕಾವೀ ಕೃಷ್ಣದಾಸ ಮಂಗಳೂರು, ಡಾ.ಗೀತಾ ಕುಮಾರಿ ಪುತ್ತೂರು, ಮರಿಯಸ್ ಪಿಯುಸ್ ಡಿಸೋಜ ಮಂಗಳೂರು, ಮಲ್ಲೇಶಯ್ಯ ಎಚ್.ಎಂ ರಾಮಕುಂಜ, ರಮೇಶ್ ನಾಯ್ಕ ಮೆಲ್ಕಾರ್, ವಿಂಧ್ಯಾ ಎಸ್. ರೈ ಬಂಟ್ವಾಳ, ಚಂದ್ರಾವತಿ ಬಡ್ಡಡ್ಕ ಸುಳ್ಯ, ರೇಣುಕಾ ಸುಧೀರ್ ಅರಸಿನಮಕ್ಕಿ, ಸುಭಾಷಿಣಿ ಬೆಳ್ತಂಗಡಿ, ಸುಧಾ ನಾಗೇಶ್ ಮಂಗಳೂರು, ಅರುಣಾ ಶ್ರೀನಿವಾಸ್ ಬೆಳ್ತಂಗಡಿ, ಪೂಜಾ ಪಕ್ಕಳ ಬೆಳ್ತಂಗಡಿ, ಹರೀಶ್ ಮಂಜೊಟ್ಟಿ ಬಂಟ್ವಾಳ, ವಿದ್ಯಾಶ್ರೀ ಅಡೂರು ಬೆಳ್ತಂಗಡಿ, ಶಂಕರ ತಾಮನ್ಕರ್ ಮುಂಡಾಜೆ, ಮುನವ್ವರ್ ಜೋಗಿ ಬೆಟ್ಟು ಬೆಳ್ತಂಗಡಿ, ಮುಹಮ್ಮದ್ ಸಿಂಸಾರುಲ್ ಹಕ್ ಪುತ್ತೂರು ಕವನಗಳನ್ನು ವಾಚಿಸಿದರು. ಸುಳ್ಯ ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ.ಮಹೇಶ್ ಶೆಟ್ಟಿ ಹಾಗೂ ಶಿಕ್ಷಕಿ ತೇಜಸ್ವಿನಿ ಅಂಬೆಕಲ್ಲು ನಿರೂಪಿಸಿದರು. ಶಿಕ್ಷಕಿ ವಸಂತಿ ಟಿ.ನಿಡ್ಲೆ ವಂದಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.