ವಿಟ್ಲ: ವೀರಕಂಬ ಎಂಬಲ್ಲಿ ಬುಧವಾರ ಸಂಜೆ ಸಿಡಿಲು ಬಡಿದ ಪರಿಣಾಮ ಕಲ್ಮಲೆ ನಿವಾಸಿ ರಘರಾಮ ಶೆಟ್ಟಿ ಅವರ ಮನೆಯ ಗೋಡೆ ಬಿರುಕು ಬಿಟ್ಟಿದೆ.
ವಿದ್ಯುತ್ ಮೀಟರ್ ಹಾಗೂ ತಂತಿಗಳಿಗೆ ಹಾನಿಯಾಗಿದೆ. ಅವರ ಮಗಳು ಪ್ರಜಿತಾ ಇಯರ್ ಫೋನ್ ಬಳಸಿ ಆನ್‌ಲೈನ್ ತರಗತಿ ಕೇಳುತ್ತಿದ್ದಳು. ಆಕೆಯ ಕಿವಿಗೆ ತೊಂದರೆಯಾಗಿದೆ. ಇನ್ನೊಬ್ಬ ಮಗಳು ರಕ್ಷಿತಾ ಬಚ್ಚಲುಮನೆಯಲ್ಲಿ ಕುಸಿದು ಬಿದ್ದಿದ್ದು, ಅಪಾಯದಿಂದ ಪಾರಾಗಿದ್ದಾಳೆ. ಸ್ಥಳಕ್ಕೆ ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾ ವೇಗಸ್, ಸದಸ್ಯರು ಭೇಟಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.