ADVERTISEMENT

ಪುತ್ತೂರು | ಲೋಕಾಯುಕ್ತ ಪೊಲೀಸರ ನೋಟಿಸ್‌: ತಲೆಮರೆಸಿಕೊಂಡ ತಹಶೀಲ್ದಾರ್

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

– ಪ್ರಜಾವಾಣಿ ಚಿತ್ರ

ಪುತ್ತೂರು (ದಕ್ಷಿಣ ಕನ್ನಡ): ಮಂಗಳೂರು ಲೋಕಾಯುಕ್ತ ಪೊಲೀಸ್ ಕಚೇರಿಯಲ್ಲಿ ಸೆ. 1ರಂದು ವಿಚಾರಣೆಗೆ ಬರುವಂತೆ ಪುತ್ತೂರು ತಹಶೀಲ್ದಾರ್‌ ಎಸ್.ಬಿ. ಕೂಡಲಗಿಗೆ ನೋಟಿಸ್ ನೀಡಲಾಗಿದೆ. ತಹಶೀಲ್ದಾರ್ ಕಚೇರಿಗೂ ಗೈರುಹಾಜರಾಗಿದ್ದು, ತಲೆಮರೆಸಿಕೊಂಡಿದ್ದಾರೆ.

ಅಕ್ರಮ– ಸಕ್ರಮ ಜಮೀನು ಪರಭಾರೆಗೆ ಎನ್ಒಸಿ ನೀಡಲು ಲಂಚ ಪಡೆದಿದ್ದ ಪುತ್ತೂರು ತಾಲ್ಲೂಕು ಕಚೇರಿ ಭೂಸುಧಾರಣೆ ಶಾಖೆ ಕೇಸ್ ವರ್ಕರ್ ಸುನಿಲ್‌ರನ್ನು ಲೋಕಾಯುಕ್ತ ಪೊಲೀಸರು ಈಚೆಗೆ ಬಂಧಿಸಿದ್ದರು. ಆ ನಂತರ ತಹಶೀಲ್ದಾರ್ ತಲೆಮರೆಸಿಕೊಂಡಿದ್ದಾರೆ. 

ಎನ್‌ಒಸಿಗೆ ತಹಶೀಲ್ದಾರ್‌ ಸಹಿ ಬಾಕಿ ಇತ್ತು. ಸಹಿ ಹಾಕಲು ತಹಶೀಲ್ದಾರ್‌ಗೆ ₹10 ಸಾವಿರ ಹಾಗೂ ನನಗೂ ಹಣ ಕೊಡಬೇಕು’ ಎಂದು ಸುನಿಲ್ ಹೇಳಿದ್ದರು. ಗುರುವಾರ ಅಜಿತ್ ಎಂಬುವರಿಂದ ₹12 ಸಾವಿರ ಲಂಚ ಪಡೆಯುವಾಗ ಸುನಿಲ್‌ರನ್ನು ಬಂಧಿಸಲಾಗಿತ್ತು.

‘ತಹಶೀಲ್ದಾರ್‌ಗೆ ರಜೆ ಪಡೆದಿಲ್ಲ. ರಜೆ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.