ADVERTISEMENT

ಸುಲ್ತಾನ್ ಬತ್ತೇರಿ ಸಮೀಪ ಭಾರಿ ಸದ್ದು: ಮನೆಯಿಂದ ಹೊರಗೆ ಓಡಿದ ಜನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 8:24 IST
Last Updated 9 ಆಗಸ್ಟ್ 2024, 8:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಂಗಳೂರು: ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ಸಮೀಪದ ಅಂಬಲವಯಲ್ ಗ್ರಾಮದ ಸುತ್ತಮುತ್ತ ಭಾರಿ ಸದ್ದು ಕೇಳಿ ಆತಂಕಗೊಂಡ ಜನರು ಮನೆಯಿಂದ ಹೊರಗೆ ಓಡಿದ್ದಾರೆ. ಸಮೀಪದ ಶಾಲೆಗಳಿಂದ ಮಕ್ಕಳನ್ನು ಮನೆಗೆ ಕಳುಹಿಸಲಾಗಿದೆ.

ಯಾರಿಗೂ ಅಪಾಯವಾಗಲಿಲ್ಲ. ಕೆಲವು‌ ಮನೆಗಳಲ್ಲಿ ಅಂಬೂತಿಮಲ ಎಂಬಲ್ಲಿ 2019ರಲ್ಲಿ ಸಣ್ಣ ಪ್ರಮಾಣದ ಭೂಕುಸಿದ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ‌.

ADVERTISEMENT

ಕೊಯಿಕ್ಕೋಡ್ ಜಿಲ್ಲೆಯ ಕೆಲವು ಭಾಗಗಳಲ್ಲೂ ಭೂಮಿ ಕಂಪಿಸಿದೆ ಎಂದು ಹೇಳಲಾಗಿದೆ.

ಅಂಬಲವಯಲ್ ಗ್ರಾಮದ ಪ್ರಾದೇಶಿಕ ಕೃಷಿ ಅಧ್ಯಯನ ಕೇಂದ್ರ, ಮಂಗೊಂಬ್‌, ನೆನ್ಮೇನಿ ಗ್ರಾಮದ ಅಂಬುಕುತ್ತಿ ಮಾಳಿಗ, ಪಡಿಪರಂಬ್‌, ವೈತ್ತಿರಿ ತಾಲ್ಲೂಕಿನ ಸುಗಂಧಗಿರಿ, ಅಚ್ಚೂರಾನ್ ಗ್ರಾಮದ ಸೇಟುಕುನ್ನ್‌, ವೇಂಙಪಳ್ಳಿ ಗ್ರಾಮದ ಕಾರಾಟ್ಟಪಿಡಿ, ಮೈಲಾಡಿಪ್ಪಡಿ, ಚೋಲಪ್ಪುರಂ ಹಾಗೂ ತೈಕುಂತರ ಪ್ರದೇಶಗಳಲ್ಲಿ ಭಾರಿ ಸದ್ದು ಕೇಳಿರುವುದಾಗಿ ಜಿಲ್ಲೆಯ ತುರ್ತು ಪರಿಸ್ಥಿತಿ ನಿರ್ವಹಣಾ ಕೇಂದ್ರ ತಿಳಿಸಿದೆ. ಈ ಭಾಗದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಆರ್‌.ಮೇಘಶ್ರೀ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.