ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯ
(ಚಿತ್ರ ಕೃಪೆ: https://madhurtemple.in/)
ಕಾಸರಗೋಡು: ಮಧೂರು ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಇಬ್ಬರು ತಂತ್ರಗಳಿಗೆ ಹೊಣೆಯಲ್ಲಿ ಸಮಾನ ಪಾಲು ಒದಗಿಸಲಾಗಿದೆ. ಮಾ.27ರಿಂದ ಏ.2ವರೆಗೆ ಇಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಕಾರ್ಮಿಕತ್ವದ ಹೊಣೆ ದೇರಬೈಲು ಶಿವಪ್ರಸಾದ್ ತಂತ್ರಿ ಅವರಿಗೆ ಮತ್ತು ಏ.2 ಸಂಜೆಯಿಂದ 7ವರೆಗೆ ನಡೆಯುವ ಮೂಡಪ್ಪ ಸೇವೆಯ ಕಾರ್ಮಿಕತ್ವದ ಹೊಣೆಯನ್ನು ಉಳಿಯತ್ತಾಯ ವಿಷ್ಣು ಅಸ್ರ ಅವರಿಗೆ ನೀಡಲಾಗಿದೆ.
ಕೇರಳ ಹೈಕೋರ್ಟ್ ಆದೇಶ ಪ್ರಕಾರ ದೇವಸ್ವಂ ಬೋರ್ಡ್ ಕಮೀಷನರ್ ಟಿ.ಸಿ.ಬಿಜು ಅವರ ನೇತೃತ್ವದಲ್ಲಿ ಮಧೂರು ದೇವಾಲಯದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ದೇವಸ್ವಂ ಬೋರ್ಡ್ ಸಹಾಯಕ ಕಮೀಷನರ್ ಕೆ.ಪಿ.ಪ್ರದೀಪ್ ಕುಮಾರ್ ದೇವಾಲಯದ ಕಾರ್ಯಕಾರಿ ಅಧಿಕಾರಿ ಟಿ.ರಾಜೆಶ್ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.