ಉಪ್ಪಿನಂಗಡಿ: ಇಲ್ಲಿನ ಕೆಮ್ಮಾರ ಎಂಬಲ್ಲಿ ತೋಡಿನಲ್ಲಿ ಸೇತುವೆಯ ಅಡಿಯಲ್ಲಿ ಹಳೆಯ ಮುಳುಗು ಸೇತುವೆ ಮೇಲೆ ನಿಂತು ನೀರಿನಲ್ಲಿ ತೇಲಿ ಬರುತ್ತಿದ್ದ ತೆಂಗಿನ ಕಾಯಿ ಸಂಗ್ರಹಿಸುತ್ತಿದ್ದಾಗ ಆಕಸ್ಮಿಕವಾಗಿ ಹರಿಯುವ ನೀರಿಗೆ ಬಿದ್ದು, ಯುವಕನೊಬ್ಬ ಬುಧವಾರ ಕಣ್ಮರೆಯಾಗಿದ್ದಾರೆ.
ಇಸ್ಮಾಯಿಲ್ ಎಂಬುವರ ಪುತ್ರ ಶಫಿಕ್ (18) ಕಣ್ಮರೆಯಾದ ಯುವಕ. ಮುಳುಗು ಸೇತುವೆ ಅಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದ್ದು, ಆ ಪರಿಸರದಲ್ಲಿ ಒಂದು ತಾಸು ಹುಡುಕಾಟ ನಡೆಸಲಾಯಿತು. ಶೋಧ ಕಾರ್ಯ ಮುಂದುವರಿದಿದೆ.
ಎಸ್.ಕೆ.ಎಸ್.ಎಸ್.ಎಫ್ ವಿಖಾಯ ತಂಡದ ಸದಸ್ಯರು, ಸ್ಥಳೀಯ ಯುವಕರು, ಅಗ್ನಿಶಾಮಕ ದಳದವರು ಶೋಧ ಕಾರ್ಯ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.