ADVERTISEMENT

ಅಂತರ್ಜಾಲ ತುಳು ವಿಚಾರಗೋಷ್ಠಿಗೆ ಡಾ.ಮೋಹನ್ ಆಳ್ವ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2021, 5:28 IST
Last Updated 15 ಜುಲೈ 2021, 5:28 IST

ಮಂಗಳೂರು: ತುಳು ಅತ್ಯಂತ ಪ್ರಾಚೀನ ಪರಂಪರೆ ಹೊಂದಿದ ಭಾಷೆಯಾಗಿದ್ದು, ತುಳುನಾಡಿನ ಸಂಸ್ಕೃತಿ-ಸಂಸ್ಕಾರವನ್ನು ಉಳಿಸಿ ಬೆಳೆಸುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪಾತ್ರ ಹಿರಿದಾಗಿದೆ ಎಂದು ಮೂಡುಬಿದಿರೆಯ ಡಾ.ಮೋಹನ್ ಆಳ್ವ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವಿಶೇಷ ಸಂಯೋಜನೆಯಲ್ಲಿ ವಿಶ್ವದ ವಿವಿಧ ತುಳು ಸಂಘಟನೆಗಳ ಪ್ರಮುಖರ ಆನ್‌ಲೈನ್‌ ತುಳು ವಿಚಾರಗೋಷ್ಠಿಯ ಸರಣಿ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಜನೆಗಳಿಗೆ ಧ್ವನಿಯಾಗಿ ವಿಶ್ವದ ತುಳುವರು ತಾಯ್ನೆಲದಲ್ಲಿ ಕಾರ್ಯನಿರ್ವಹಿಸಬೇಕು ಎಂಬ ಸಂಘಟನಾತ್ಮಕ ಚಿಂತನೆಯ ಜತೆಗೆ ತುಳು ಭಾಷೆಗೆ ಮಾನ್ಯತೆ, ತುಳು ಕಲಿಸುವ ಶಿಕ್ಷಕರ ಗೌರವ, ತುಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರಯತ್ನ ನಿರಂತರವಾಗಿ ಸಾಗಲಿದೆ ಎಂದರು.

ADVERTISEMENT

ವಿಚಾರಗೋಷ್ಠಿಯಲ್ಲಿ ತುಳುನಾಡಿನ ಕಟ್ಟುಕಟ್ಟಲೆ ಎಂಬ ವಿಷಯದಲ್ಲಿ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಮಾತನಾಡಿ, ಕೃಷಿ ಪ್ರಧಾನವಾದ ತುಳುನಾಡಿನಲ್ಲಿ ಜಾತಿ ಆಧಾರದ ಕಟ್ಟು ಕಟ್ಟಲೆ ಇದೆ. ಮೌಲ್ಯಯುತ ಸಂಸ್ಕೃತಿಗೆ ಪರಂಪರೆ ಬೆಸೆದುಕೊಂಡಿದೆ. ಮದುವೆ, ಸೀಮಂತ, ಸಾವಿನ ಕ್ಷಣದಲ್ಲಿಯೂ ಸಂಪ್ರದಾಯ ಅಡಗಿದೆ. ಮಹಿಳೆಯರ ಆಭರಣಗಳಲ್ಲೂ ಭಾವೈಕ್ಯತೆ ಇದೆ ಕಂಬಳ ತುಳುನಾಡಿನ ಕೊಂಡಿಯಾಗಿ ಆಚಾರ-ವಿಚಾರಗಳ ಮೂಲವಾಗಿದೆ ಎಂದರು.

ವಿಶ್ವದ ವಿವಿಧ ತುಳು ಸಂಘಟನೆಗಳ 177 ಪ್ರಮುಖರು ಭಾಗವಹಿಸಿದ್ದರು. ಅಸ್ಟ್ರೇಲಿಯಾದಿಂದ ಸುರೇಶ್ ಪೂಂಜ, ಶ್ರೀಕಲ ಬೊಲ್ಲಂಜೆ ಜಪಾನ್, ರೋಶನ್ ಪಿಂಟೊ ಬ್ಯಾಂಕಾಕ್, ಕಕ್ವಗುತ್ತು ಭಾನುಮತಿ ಶೆಟ್ಟಿ ಜರ್ಮನಿ , ಕೌಡೂರು ನಾರಾಯಣ ಶೆಟ್ಟಿ ಇಟಲಿ, ಭಾಸ್ಕರ ಶೇರಿಗಾರ್ ಅಮೆರಿಕ, ಅನಿತಾ ನಾಯಕ್ ಕ್ಯಾಲಿಫೋರ್ನಿಯಾ, ಸುಧಾಕರ ಆಳ್ವ, ಶ್ರೀವಲ್ಲಿ ಫ್ಲೋರಿಡಾ, ಉಮೇಶ್ ಅಸೈಗೋಳಿ, ಪ್ರಕಾಶ್ ಉಡುಪ ಅಮೆರಿಕ, ಶರತ್ ಶೆಟ್ಟಿ ಸೌತ್ ಆಫ್ರಿಕ, ರವಿ ಶೆಟ್ಟಿ ಕತಾರ್, ಗಣೇಶ್ ರೈ ದುಬೈ, ಮನೋಹರ್ ತೋನ್ಸೆ ದುಬೈ, ಪ್ರಕಾಶ್ ರಾವ್ ಪಯ್ಯಾರ್ ದುಬೈ, ಸಂತೋಷ್ ಶೆಟ್ಟಿ ಸೌದಿ ಅರೆಬಿಯಾ, ರಮಾನಾಂದ ಶೆಟ್ಟಿ ಒಮನ್, ಸನತ್ ಶೆಟ್ಟಿ ಕುವೈತ್, ಗಣೇಶ್ ಮಾಣಿಲ ಬಹರೈನ್, ಬೆಂಗಳೂರಿನಿಂದ ಡಾ. ಕೆ.ಸಿ.ಬಲ್ಲಾಳ, ಕೆ.ಎನ್.ಅಡಿಗ ಅಡೂರು, ಯಾದವ ಕಲ್ಲಾಪು, ರಾಜರಾಂ ಶೆಟ್ಟಿ ಉಪ್ಪಳ, ಮುಂಬೈ ಧರ್ಮಪಾಲ್ ದೇವಾಡಿಗ, ಗುಜರಾತ್ ಬಾಲಕೃಷ್ಣ ವಾಪಿ, ಈಶ್ವರ ಚಿಟ್‌ಪಾಡಿ, ವಿಜಯಕುಮಾರ್ ಭಂಡಾರಿ, ಹಾಸನದ ಶೀನಪ್ಪ ಆಳ್ವ, ಭದ್ರವಾತಿಯ ಡಾ. ಹರೀಶ್ ದೇಲಂತ ಬೆಟ್ಟು, ದೆಹಲಿಯ ವಸಂತ ಶೆಟ್ಟಿ ಬೆಳ್ಳಾರೆ, ಡಾ.ಬಾಲಕೃಷ್ಣ ಶೆಟ್ಟಿ ಪುಣೆ ಅಭಿಪ್ರಾಯ ಮಂಡಿಸಿದರು. ಅಕಾಡೆಮಿಯ ಸದಸ್ಯರಾದ ಸರ್ವೋತ್ತಮ ಶೆಟ್ಟಿ ದುಬೈ, ನಿಟ್ಟೆ ಶಶಿಧರ ಶೆಟ್ಟಿ, ಕಾಂತಿ ಶೆಟ್ಟಿ ಬೆಂಗಳೂರು ವೀಕ್ಷಕರೊಂದಿಗೆ ಸಂವಹನ ನಡೆಸಿದರು.

ತಾಂತ್ರಿಕ ವ್ಯವಸ್ಥೆಯನ್ನು ಸತೀಶ್ ಅಗ್ಪಾಲ ಬೆಂಗಳೂರು ನಿರ್ವಹಿಸಿದರು. ಅಕಾಡೆಮಿಯಅಧ್ಯಕ್ಷ ದಯಾನಂದ ಜಿ. ಕತ್ತಲ್‌ಸಾರ್, ಸದಸ್ಯರಾದ ಕಲಾವತಿ ದಯಾನಂದ್, ವಿಜಯಲಕ್ಷ್ಮೀ ಪ್ರಸಾದ್ ರೈ , ನಿಟ್ಟೆ ಶಶಿಧರ ಶೆಟ್ಟಿ, ಪ್, ರಿಜಿಸ್ಟ್ರಾರ್ ಕವಿತಾ ಪ್ರಶಾಂತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.