ADVERTISEMENT

ಮಂಗಳೂರು | ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2025, 7:09 IST
Last Updated 16 ಆಗಸ್ಟ್ 2025, 7:09 IST
ಎಂಸಿಸಿ ಬ್ಯಾಂಕ್‌ನಲ್ಲಿ ಪದ್ಮರಾಜ್ ಪೂಜಾರಿ ಧ್ವಜಾರೋಹಣ ನೆರವೇರಿಸಿದರು
ಎಂಸಿಸಿ ಬ್ಯಾಂಕ್‌ನಲ್ಲಿ ಪದ್ಮರಾಜ್ ಪೂಜಾರಿ ಧ್ವಜಾರೋಹಣ ನೆರವೇರಿಸಿದರು   

ಮಂಗಳೂರು: ಎಂಸಿಸಿ ಬ್ಯಾಂಕ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಕೀಲ ಪದ್ಮರಾಜ್ ಪೂಜಾರಿ ಧ್ವಜಾರೋಹಣ ನೆರವೇರಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಎ.ಸಿ. ವಿನಯರಾಜ್, ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಮಾಜಿ ಉಪಾಧ್ಯಕ್ಷ ಎಡ್ಮಂಡ್ ಫ್ರಾಂಕ್, ಮೈಕೆಲ್ ಡಿಸೋಜ ಭಾಗವಹಿಸಿದ್ದರು.

ನಗರದ ಸಮರ್ಪಿತ ಸಂಚಾರ ವಾರ್ಡನ್‍ಗಳಾದ ಫ್ರಾನ್ಸಿಸ್ ಮ್ಯಾಕ್ಸಿಂ ಮೊರಾಸ್, ಸುನಿಲ್ ಜಾನ್ ಡಿಸೋಜ, ಜಯಂತಿ, ಮಾರ್ಸೆಲ್ ಜಾನ್ ರೊಡ್ರಿಗಸ್, ಬ್ಯಾಂಕ್‌ನ ವೃತ್ತಿಪರ ನಿರ್ದೇಶಕ ಸುಶಾಂತ್ ಸಲ್ಡಾನ, ಬ್ಯಾಂಕ್‌ ನಿರ್ದೇಶಕ ರೋಶನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.

ADVERTISEMENT

ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಅನಿಲ್ ಪತ್ರಾವೊ, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಡೇವಿಡ್ ಡಿಸೋಜ, ಹೆರಾಲ್ಡ್ ಮೊಂತೆರೊ, ಜೆರಾಲ್ಡ್ ಪಿಂಟೊ, ಮೆಲ್ವಿನ್ ವಾಸ್,ಎಲ್ರಾಯ್ ಕ್ರಾಸ್ಟೊ, ಸಿ.ಜಿ.ಪಿಂಟೊ, ಸುಶಾಂತ್ ಸಲ್ಡಾನ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೆಜಸ್, ಆಲ್ವಿನ್ ಪಿ. ಮೊಂತೆರೊ ಉಪಸ್ಥಿತರಿದ್ದರು. ಜೈಸನ್ ಶಿರ್ತಾಡಿ ನಿರೂಪಿಸಿದರು. ಸುನಿಲ್ ಮಿನೇಜಸ್ ವಂದಿಸಿದರು.

‘ಸಂಘಟಿತ ಹೋರಾಟ ಅಗತ್ಯ’

‘ಸಮಾಜದಲ್ಲಿ ವಿಚ್ಛಿದ್ರಕಾರಿ ಶಕ್ತಿಗಳು ಸಾಮರಸ್ಯವನ್ನು ಕದಡುವ ಮೂಲಕ ದ್ವೇಷವನ್ನು ಹರಡಿ ರಾಜಕೀಯ ಶಕ್ತಿ ಪಡೆದು ಅಧಿಕಾರ ಪಡೆಯಲು ಹವಣಿಸುತ್ತಿವೆ. ಇದರ ವಿರುದ್ಧ ಸಂಘಟಿತರಾಗಿ ಧ್ವನಿ ಎತ್ತಬೇಕು’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.

ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಪ್ರಮುಖರಾದ ಜೆ.ಆರ್.ಲೋಬೊ, ಸುರೇಶ್ ಬಳ್ಳಾಲ್, ಟಿ.ಹೊನ್ನಯ್ಯ, ನೀರಜ್‌ಚಂದ್ರ ಪಾಲ್, ಎಸ್.ಅಪ್ಪಿ, ಕೆ.ಕೆ.ಶಾಹುಲ್ ಹಮೀದ್, ಜೆ.ಅಬ್ದುಲ್ ಸಲೀಂ, ನವೀನ್ ಡಿಸೋಜ, ಕೆ.ಪಿ ಥೋಮಸ್, ವಿಶ್ವನಾಥ್ ಬಜಾಲ್, ಲುಕ್ಮಾನ್ ಬಂಟ್ವಾಳ್, ಜಯಶೀಲ ಅಡ್ಯಂತಾಯ ಇದ್ದರು. ಜೋಕಿಂ ಡಿಸೋಜ ಧ್ವಜ ಪ್ರಭಾರಿಯಾಗಿ ನಿರ್ವಹಿಸಿದರು.

ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಹರೀಶ್ ಕುಮಾರ್ ಮಾತನಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.