ADVERTISEMENT

ಪ್ರೊ.ಕ್ಲೆಮೆಂಟ್‌ ಡಿಸೋಜ ನಿಧನ

​ಪ್ರಜಾವಾಣಿ ವಾರ್ತೆ
Published 18 ಜುಲೈ 2020, 2:36 IST
Last Updated 18 ಜುಲೈ 2020, 2:36 IST
ಕ್ಲೆಮೆಂಟ್‌ ಡಿಸೋಜ
ಕ್ಲೆಮೆಂಟ್‌ ಡಿಸೋಜ   

ಮಂಗಳೂರು: ಸೆಂಟ್‌ ಆ್ಯಗ್ನೆಸ್‌ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕ್ಲೆಮೆಂಟ್‌ ಡಿಸೋಜ (73) ಅವರು ನಗರದ ಬೆಂದೂರ್‌ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಪ್ರಾಣಿಕ್‌ ಹೀಲಿಂಗ್‌ ಮತ್ತು ಭಾಷಾ ಕಲಿಕೆಯ ತರಬೇತಿಯನ್ನೂ ನೀಡುತ್ತಿದ್ದ ಕ್ಲೆಮೆಂಟ್‌ ಡಿಸೋಜ, ಆಸ್ಟ್ರೇಲಿಯಾದಲ್ಲಿರುವ ಮಗನ ಮನೆಗೆ 2019ರಲ್ಲಿ ಪತ್ನಿಯೊಂದಿಗೆ ತೆರಳಿದ್ದರು. 2020ರ ಜನವರಿಯಲ್ಲಿ ವಾಪಸಾಗಿದ್ದರು. ಪತ್ನಿ ಮಾರ್ಚ್‌ ಅಂತ್ಯದಲ್ಲಿ ವಾಪಸಾಗಬೇಕಿತ್ತು. ಲಾಕ್‌ಡೌನ್‌ ಕಾರಣದಿಂದ ಪತ್ನಿ ಆಸ್ಟ್ರೇಲಿಯಾದಲ್ಲೇ ಉಳಿದಿದ್ದರು.

ಕ್ಲೆಮೆಂಟ್‌ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಶುಕ್ರವಾರ ಬೆಳಿಗ್ಗೆ ಮನೆಯಿಂದ ಎದ್ದು ಹೊರಬಂದಿರಲಿಲ್ಲ. ಸಂಬಂಧಿಕರು ಮನೆಗೆ ಹೋಗಿ ಎಬ್ಬಿಸಲು ಯತ್ನಿಸಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ನಂತರ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ತೆರೆದು ಒಳಕ್ಕೆ ಹೋಗಿ ನೋಡಿದಾಗ, ಅವರು ಮೃತಪಟ್ಟಿರುವುದು ಕಂಡುಬಂತು.

ADVERTISEMENT

‘ಮೃತದೇಹವನ್ನು ಫಾದರ್‌ ಮುಲ್ಲರ್ಸ್‌ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೋವಿಡ್‌ ಪರೀಕ್ಷೆಯ ವರದಿ ಬರಬೇಕಿದೆ. ನಂತರ ಕುಟುಂಬದ ಸದಸ್ಯರ ಅಭಿಪ್ರಾಯದಂತೆ ಅಂತ್ಯಸಂಸ್ಕಾರ ನಡೆಸಲಾಗುವುದು’ ಎಂದು ಕ್ಲೆಮೆಂಟ್‌ ಅವರ ಸಂಬಂಧಿ ಸಿಸಿಲಿಯಾ ಡಿಸೋಜ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.